ಬೈಕ್ ಅಪಘಾತದಲ್ಲಿ ಕಬಡ್ಡಿ, ಖೋಖೋ ಆಟಗಾರರು ಸಾವು

ಮಂಗಳವಾರ, 31 ಆಗಸ್ಟ್ 2021 (18:12 IST)
ಬೈಕುಗಳ ಮುಖಾಮುಖಿ ಡಿಕ್ಕಿಯಾಗಿ ರಾಷ್ಟ್ರಮಟ್ಟದ ಖೋ ಖೋ ಆಟಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕುಗಳು ಡಿಕ್ಕಿಯಾಗಿ ಸವಾರರಿಬ್ಬರು ರಸ್ತೆಗೆ ಬೀಳುವ ಧಾರುಣ ಘಟನೆ ಸಿಸಿ
ಟಿವಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ಖ್ಯಾತ ಖೋ ಖೋ ಆಟಗಾರ ನವೀನ್ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ತೀವ್ರ ಗಾಯಗೊಂಡಿದ್ದ ನವೀನ್ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಗೋಪಾಳದ ದ್ರೌಪದಮ್ಮ ಸರ್ಕಲ್’ನಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ.
ಎರಡು ಬೈಕುಗಳು ಅತಿ ವೇಗವಾಗಿ ಬಂದಿದ್ದರಿಂದ ಸವಾರರಿಗೆ ಕಂಟ್ರೋಲ್ ಸಿಗದೆ ಗುದ್ದಿಕೊಂಡಿವೆ. ಅಪಘಾತದ ರಭಸಕ್ಕೆ ಬೈಕುಗಳು ನುಜ್ಜುಗುಜ್ಜಾಗಿವೆ. ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ನಡುವೆ ಖೋ ಖೋ ಆಟಗಾರ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದು ಬೈಕ್’ನ ಸವಾರ ನವೀನ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ