ರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದ್ದುಫುಡ್ ಡೆಲಿವರಿ ಮಾಡಲು ಸ್ವಿಗ್ಗಿ ಡೆಲಿವರಿ ಬಾಯ್ ಹೋಗ್ತಿದ್ದ.ಈ ವೇಳೆ ನಿಂತಿರೋ ಇಯ್ಚರ್ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ.ಪರಿಣಾಮ ಗಂಭೀರ ಗಾಯವಾಗಿ ಘಟನಾ ಸ್ಥಳದಲ್ಲೇ ಸಾವನಾಪ್ಪಿದ್ದು,ಬಿಜಾಪುರದ ಇಂಡಿ ಮೂಲದ ನಾಗಪ್ಪ(31) ಸಾವನ್ನಪ್ಪಿರೋ ಸವಾರನಾಗಿದ್ದಾನೆ.ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್, ಮಾವನ ಮನೇಲಿ ವಾಸವಿದ್ದ.ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ..ನಿನ್ನೆ ರಾತ್ರಿ ಫುಡ್ ಡೆಲಿವರಿ ಗೆ ಹೋಗೋವಾಗ ಸೆಲ್ಫ್ ಆ್ಯಕ್ಸಿಡೆಂಟ್ ಆಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡ್ತಿದ್ದು,ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.