ಕೆಎಸ್ ಆರ್ ಟಿಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸಾವು

ಶನಿವಾರ, 5 ನವೆಂಬರ್ 2022 (17:25 IST)
ಕೆ ಎಸ್ ಆರ್ ಟಿ ಸಿ ಬಸ್ ಗೆ ಬೈಕ್  ಡಿಕ್ಕಿ ಹೊಡೆದು ಸವಾರ ಸಾವಾನಾಪ್ಪಿರುವ ಘಟನೆ ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಘಟನೆಯಲ್ಲಿ ಬೈಕ್ ಸವಾರ ರಮೇಶ್ (39) ಸಾವಾನಾಪ್ಪಿದ್ದು,ರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ.ಕುಕ್ಕೇ ಸುಬ್ರಮಣ್ಯದಿಂದ ಬೆಂಗಳೂರಿಗೆ ಬಂದಿದ್ದ ಕೆ.ಎಸ್ ಆರ್ ಟಿಸಿ ಬಸ್ ರಾಜ್ ಕುಮಾರ್ ರಸ್ತೆಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಸವಾರನ ತಲೆಗೆ ಏಟು ಬಿದ್ದು ಗಂಭೀರ ಗಾಯವಾಗಿದ್ದು,ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಾನಾಪ್ಪಿದ್ದಾನೆ.ಆ್ಯಕ್ಸಿಡೆಂಟ್ ಜಾಗದಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದು,ಕುಡಿದ ಅಮಲಿನಲ್ಲಿ ಬೈಕ್ ಓಡಿಸಿರೋ ಶಂಕೆ ವ್ಯಕ್ತವಾಗಿದೆ.
 
ಬೈಕ್‌ನಲ್ಲಿ‌ ಮದ್ಯದ ಬಾಟಲಿಗಳನ್ನ ಇಟ್ಟು ಬಂದಿದ್ದ.ರಾಜ್ ಕುಮಾರ್ ರಸ್ತೆಲ್ಲಿ ಹೋಗೋವಾಗ ಬಲ ತಿರುವು ಪಡೆದುಕೊಳ್ಳೋವಾಗ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಅಪಘಾತದ ನಂತರ ಬಸ್ ಡ್ರೈವರ್, ಕಂಡಕ್ಟರ್ ಗೆ ಥಳಿಸಿದ್ದು,ಮೃತನ ಬೈಕ್ ಬಿದ್ದ ಕೂಡಲೇ ಹಿಂದೆಯೇ  ಮೃತನ ಸ್ನೇಹಿತರು.15ಕ್ಕೂ ಹೆಚ್ಚು ಜನ ಮೃತ ರಮೇಶ್ ಕಡೆಯವರು ಬಂದಿದ್ರು.ಆ್ಯಕ್ಸಿಡೆಂಟ್ ಮಾಡಿದ್ದೀರ ಎಂದು ಡ್ರೈವರ್ ಕಂಡಕ್ಟರ್ ಇಬ್ಬರಿಗೂ ಮೃತನ ಸ್ನೇಹಿತರು ರಸ್ತೆಯಲ್ಲಿ ಥಳಿಸಿದ್ದಾರೆ.ಸದ್ಯ ಘಟನೆ ಸಂಬಂಧ ರಾಜಾಜಿನಗರ ಠಾಣೆಗೆ ಡ್ರೈವರ್, ಕಂಡಕ್ಟರ್ ದೂರು ನೀಡಿದ್ದಾರೆ.ಆ್ಯಕ್ಸಿಡೆಂಟ್ ಸಂಬಂಧ ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ