ಸಿಮ್ ಕಾರ್ಡ್ ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ
ಮೊಬೈಲ್ ಫೋನ್ ಸಿಮ್ ಕಾರ್ಡ್ ಖರೀದಿಗೆ ಬಯೋಮೆಟ್ರಿಕ್ ಕಡ್ಡಾಯಗೊಳಿಸುವ ದೂರಸಂಪರ್ಕ ಮಸೂದೆ-2023 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಟೆಲಿಫೋನ್ ಕದ್ದಾಲಿಕೆಗೆ 3 ವರ್ಷ ಜೈಲು ಹಾಗೂ 2 ಕೋಟಿ ರೂ. ದಂಡ ವಿಧಿಸುವುದು, ತುರ್ತು ಸಂದರ್ಭದಲ್ಲಿ ಟೆಲಿಕಾಂ ಕಂಪನಿಯ ಮೊಬೈಲ್ ನೆಟ್‌ವರ್ಕ್ ಅನ್ನು ಜಪ್ತಿ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಅಂಶವೂ ಈ ವಿಧೇಯಕದಲ್ಲಿ ಮಂಡಿಸಲಾಗಿದೆ.