ಚಾಮರಾಜನಗರ : ವಿದ್ಯುತ್ ಸ್ಪರ್ಶಿಸಿ 11 ತಿಂಗಳ ಗಂಡು ಮಗು ಸಾವನ್ನಪ್ಪಿದ್ದು, ಮಗುವನ್ನು ರಕ್ಷಿಸಲು ಹೋದ ತಾಯಿ ಅಸ್ವಸ್ಥಗೊಂಡಿರುವ ಘಟನೆ ನಗರದ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ.
ನೆಲದ ಮೇಲೆ ಇಟ್ಟಿದ್ದ ಸ್ವಿಚ್ ಬೋರ್ಡ್ಗೆ ಆಟವಾಡುತ್ತಾ ಕೈ ಹಾಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ವೇಳೆ ಮಗು ರಕ್ಷಿಸಲು ಹೋದ ತಾಯಿ ಲಕ್ಷ್ಮೀ ಕೂಡಾ ವಿದ್ಯುತ್ ಶಾಕ್ನಿಂದ ಅಸ್ವಸ್ಥಗೊಂಡಿದ್ದಾರೆ.
ಮಹಿಳೆಯು ಯಳಂದೂರಿನ ಹೊಸಕೇರಿ ನಿವಾಸಿಯಾಗಿದ್ದು, ಸಹೋದರಿ ಮಗುವಿನ ಹುಟ್ಟುಹಬ್ಬಕ್ಕೆ ತನ್ನ ಮಗುವಿನೊಂದಿಗೆ ತವರಿಗೆ ಬಂದಿದ್ದರು.