ಜಂತಕಲ್ ಮೈನಿಂಗ್ ಕಂಪನಿಯ ಕ್ರಿಮಿನಲ್ ಜತೆ ಸಿಎಂ ಕುಮಾರಸ್ವಾಮಿಗೆ ನಂಟು: ಬಿಜೆಪಿ ಆರೋಪ

ಗುರುವಾರ, 20 ಸೆಪ್ಟಂಬರ್ 2018 (17:09 IST)
ಬೆಂಗಳೂರು: ಇಂದು ಸಂಜೆ 4 ಗಂಟೆಗೆ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬದವರ ಅಕ್ರಮ ಬಯಲಿಗೆಳೆಯುತ್ತೇವೆ ಎಂದಿದ್ದ ಬಿಜೆಪಿ ಸಿಎಂ ಕುಟುಂಬದ ವಿರುದ್ಧ ಆರೋಪಗಳ ಪಟ್ಟಿ ಹೊರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆ ಪುಟ್ಟಸ್ವಾಮಿ ಜಂತಕಲ್ ಮೈನಿಂಗ್ ಕಂಪನಿಯ ಕ್ರಿಮಿನಲ್ ವಿನೋದ್ ಗೋಯಲ್ ಜತೆಗೆ ಸಿಎಂ ಕುಮಾರಸ್ವಾಮಿ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಬೇಕಾದರೆ ದಾಖಲೆ ನೀಡಲು ಸಿದ್ಧ ಎಂದಿದ್ದಾರೆ. ಈ ಮೊದಲು ಮೈಸೂರಿನಲ್ಲಿ ದೇವೇಗೌಡರ ಕುಟುಂಬ 3000 ಕೋಟಿ ಮೌಲ್ಯದ ಜಮೀನು ಅಕ್ರಮವಾಗಿ ನುಂಗಿದೆ ಎಂದು ಬಿಎಸ್ ಯಡಿಯೂರಪ್ಪ ಆರೋಪಿಸಿದ್ದರು.

 ಅದರ ಜತೆಗೆ ಇನ್ನೊಂದೆಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ಶಾಸಕ, ಮಾಜಿ ಸಚಿವ ಆರ್ ಅಶೋಕ್ ಉದಯಪುರದಲ್ಲಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಮಾಡುತ್ತೇನೆ ಎಂದಿದ್ದ ಹೇಳಿಕೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಘೋಷಿಸಿದ್ದಾರೆ.

ಸಿಎಂ ಹೇಳಿಕೆ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಸಿಎಂ ಕುಮಾರಸ್ವಾಮಿ ಕರ್ನಾಟಕವನ್ನು ಜಂಗಲ್ ರಾಜ್ ಮಾಡಲು ಹೊರಟಿದ್ದಾರಾ? ಇದು ಸಂವಿಧಾನ ವಿರೋಧಿ ಹೇಳಿಕೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ