ಬಿಜೆಪಿ-ಮೈತ್ರಿ ಪಕ್ಷ ಬಿಗ್ ಫೈಟ್ ; ಕಲಾಪ ಮುಂದೂಡಿಕೆ

ಗುರುವಾರ, 18 ಜುಲೈ 2019 (18:50 IST)
ಮೈತ್ರಿ ಸರಕಾರ ವಿಶ್ವಾಸಮತ ಯಾಚನೆ ಮಾಡಲೇಬೇಕು ಎಂದು ಪಟ್ಟನ್ನು ಬಿಜೆಪಿ ಹಿಡಿದಿದ್ದರೆ, ಇತ್ತ ಕಲಾಪ ಮುಂದೂಡಿರೋದು ದೋಸ್ತಿ ಸರಕಾರಕ್ಕೆ ಕೊಂಚ ರಿಲೀಫ್ ನೀಡಿದಂತಾಗಿದೆ.

ವಿಧಾನಸಭಾ ಕಲಾಪವನ್ನು ಜುಲೈ 19ರಂದು ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ವಿಶ್ವಾಸ ಮತಯಾಚನೆ ಸಂಬಂಧ ಸುದೀರ್ಘ ಚರ್ಚೆ ವಿಧಾನಸಭೆಯಲ್ಲಿ ಆರಂಭಗೊಂಡಿತ್ತು. ಆದರೆ ಬಿಜೆಪಿ ಹಾಗೂ ದೋಸ್ತಿ ಪಕ್ಷಗಳ ಶಾಸಕರ ವಾಗ್ಯುದ್ದಕ್ಕೆ ಕಲಾಪ ಸಾಕ್ಷಿಯಾಯಿತು.

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಕಿಡ್ನಾಪ್ ಮಾಡುತ್ತಿದೆ ಅಂತ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ತಿರುಗೇಟು ನೀಡೋಕೆ ಮುಂದಾದ್ರು. ಹೀಗಾಗಿ ಗದ್ದಲದ ವಾತಾವರಣ ನಿರ್ಮಾಣವಾಗಿದೆ.

ಪರಿಣಾಮ ಕಲಾಪವನ್ನು ಸ್ಪೀಕರ್ ನಾಳೆಗೆ ಮುಂದೂಡಿಕೆ ಮಾಡಿದ್ರು. ಆದರೆ ಇದರಿಂದ ತೃಪ್ತರಾಗದ ಬಿಜೆಪಿಯವರು ಸದನದಲ್ಲೇ ಮೊಕ್ಕಾಂ ಹೂಡಲು ಸಿದ್ಧತೆ ನಡೆಸಿದ್ದಾರೆ.

ಇವತ್ತು ವಿಧಾನಸೌಧದಲ್ಲೇ ಬಿಜೆಪಿ ಶಾಸಕರು ಉಳಿದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಹೀಗಂತ ವಿಧಾನ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ