ರಾಮನಗರ, ಕನಕಪುರದಲ್ಲಿ ಮಹಿಳೆಯರಿಗೆ ಮಣೆ ಹಾಕಿದ ಬಿಜೆಪಿ

ಸೋಮವಾರ, 23 ಏಪ್ರಿಲ್ 2018 (18:41 IST)
ರಾಮನಗರ ಹಾಗೂ ಕನಕಪುರ ಕ್ಷೇತ್ರಗಳಿಗೆ ಬಿಜೆಪಿ ಮಹಿಳಾ ಅಭ್ಯರ್ಥಿಗಳ ಘೋಷಣೆ ಮಾಡಿದೆ. ನಾಲ್ಕನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿ ಮುಖಂಡರು, ಮಹಿಳೆಯರಿಗೆ ಆದ್ಯತೆ ನೀಡಿದ್ದಾರೆ. 
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪ್ರಬಲ ಎದುರಾಳಿಗಳ ವಿರುದ್ಧ ಮಹಿಳಾ ಮಣಿಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಕನಕಪುರದಿಂದ ನಂದಿನಿಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
 
 ಅದರಂತೆ ರಾಮನಗರದಿಂದ ಹೆಚ್.ಲೀಲಾವತಿ ಕಮಲ ಪಾಳೆಯದಿಂದ ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ. ಪ್ರಬಲ ಕ್ಷೇತ್ರದಲ್ಲಿ ಮಹಿಳಾ ಮಣಿಗಳಿಗೆ ಟಿಕೆಟ್ ನೀಡಿರುವ ಬಿಜೆಪಿಯ ಈ ಜಾಣನಡೆ ಯಾವ ರೀತಿಯ ಫಲಿತಾಂಶಕ್ಕೆ ಕಾರಣವಾಗಬಲ್ಲದು ಎಂಬ ಕುತೂಹಲ ಈಗ ಈ ಎರಡೂ ಕ್ಷೇತ್ರಗಳಲ್ಲಿ ಮನೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ