ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಬಿಜೆಪಿ

ಸೋಮವಾರ, 14 ನವೆಂಬರ್ 2022 (17:56 IST)
ಟಿಪ್ಪುಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ‌ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.ಇಂತಹ ಮತಾಂಧನ ಪ್ರತಿಮೆ ನಿರ್ಮಿಸಲು ಕಾಂಗ್ರೆಸ್ ಹೊರಟಿದ್ಯಾಕೆ..?ಜನಾನುರಾಗಿಯಾಗಿದ್ದ ಮೈಸೂರು ಒಡೆಯರನ್ನು ಕಪಟ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಿದನು.ಹಿಂದೂಗಳು ಮೂರನೇ ದರ್ಜೆಯ ಪ್ರಜೆಗಳಾಗಿದ್ದರು.ನೆತ್ತರಕೆರೆಯಲ್ಲಿ ಸಾವಿರಾರು ಕ್ರೈಸ್ತರ ಹತ್ಯೆ. ಕಾಂಗ್ರೆಸ್ಸಿಗರೇ,ಇಂತಹ ಮತಾಂಧನ ಪ್ರತಿಮೆಯ ಅಗತ್ಯವೇನು,?ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಟಿಪ್ಪು ಜಯಂತಿ ಜಾರಿ ಮಾಡಿದ್ದಾರೆ‌.ಪಠ್ಯಪುಸ್ತಕದಲ್ಲಿ ಟಿಪ್ಪು ಕುರಿತಾದ ನೈಜ ಇತಿಹಾಸ ಅಳವಡಿಕೆಗೆ ವಿರೋಧ,ಈಗ ಟಿಪ್ಪುವಿನ ಪ್ರತಿಮೆಯಂತೆ ಪಿಸಿಸಿ ಕಚೇರಿಯಲ್ಲೋ, ಕಾಂಗ್ರೆಸ್ ನಾಯಕರ ಮನೆಯಲ್ಲೋ ಟಿಪ್ಪು ಪ್ರತಿಮೆ ನಿರ್ಮಿಸಲಿ.ಸಾರ್ವಜನಿಕ ಸ್ಥಳದಲ್ಲಿ ಆ ಮತಾಂಧನ ಪ್ರತಿಮೆಯೇಕೆ..?ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ