ವ್ಹೀಲಿಂಗ್ ನಿಂದ ಅಮಾಯಕರ ಪ್ರಾಣ ಹೋದ ಮೇಲೆ ಎಚ್ಚೆತ್ತು ಕೊಳ್ತಾರ ಪೊಲೀಸರು ?ಪೊಲೀಸರ ಗಮನಕ್ಕೆ ಬಂದ್ರೂ ಅತನನ್ನ ಪತ್ತೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವ್ಹೀಲಿಂಗ್ ಮಾಡಿ ಶೋ ಆಫ್ ಮಾಡ್ತಾನೆ.ಈತನ ಇನ್ಸ್ಟಾಗ್ರಾಂ ಖಾತೆಯ ತುಂಬೆಲ್ಲಾ ಕೇವಲ ವ್ಹೀಲಿಂಗ್ ವೀಡಿಯೋಸ್ .ವ್ಹೀಲಿಂಗ್ ಕ್ರೇಜ್ ಗಾಗಿ ಈತನ ಇನ್ಸ್ಟಾಗ್ರಾಂ ಖಾತೆಗೆ ಇದ್ದಾರೆ 22 ಸಾವಿರ ಜನ ಫಾಲೋವರ್ಸ್ .ಈ ರೀತಿಯ ಕ್ರೇಜ್ ಗಾಗಿ ಇನ್ನು ಸಾಕಷ್ಟು ಯುವಕರು ವ್ಹೀಲಿಂಗ್ ಹುಚ್ಚಾಟ ಮಾಡೋದು ಕಲಿಯುತ್ತಿದ್ದಾರೆ.
ಇನ್ನೂ ಇಂತವರಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರಾ ..?ಹೆಲ್ಮೆಟ್ ಧರಿಸೋಲ್ಲ, ಬೈಕ್ ಗೆ ನಂಬರ್ ಪ್ಲೇಟ್ ಕೂಡ ಇರೋದಿಲ್ಲ .ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದೀವಿ ಎಂದ ಪೊಲೀಸರು ಏನ್ಮಾಡ್ತಿದ್ದಾರೆ? ಹಾಗಾದ್ರೆ ಈ ರೀತಿ ಹುಚ್ಚಾಟ ಪೊಲೀಸರಿಗೆ ತೋರುತ್ತಿಲ್ವಾ..?ಅಥಾವ ಅಮಾಯಕರ ಜೀವ ಬಲಿಯಾದ ಮೇಲೆ ಎಚ್ಚೆತ್ತುಕೋಳ್ತಾರಾ ಪೊಲೀಸರು..? ಇನಾದ್ರು ಪೊಲೀಸರು ಎಚ್ಚೇತ್ತುಕೊಂಡು ಇಂತಹ ಹುಚ್ಚಾಟಕ್ಕೆ ಬ್ರೇಕ್ ಹಾಕ್ತಾರೆ ಅಂತಾ ಕಾದು ನೋಡಬೇಕಿದೆ.