ಬೆಂಗಳೂರು : ಕಾವೇರಿ ರಾಜಕೀಯ ಜೋರಾಗಿದೆ. ತಮಿಳುನಾಡಿಗೆ ನೀರು ಹರಿಸೋದನ್ನು ಖಂಡಿಸಿ ಸೋಮವಾರ ಮಂಡ್ಯ ಬಂದ್ಗೆ ಬಿಜೆಪಿ ಕರೆ ನೀಡಿದೆ. ಮಂಡ್ಯದಲ್ಲಿ ಸಭೆ ನಡೆಸಿದ ಹಳೆ ಮೈಸೂರು ಭಾಗದ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಸೋಮವಾರ ತಮಿಳುನಾಡು ಸಲ್ಲಿಸಿರೋ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬರಲಿದೆ. ಹೀಗಾಗಿ ಅದೇ ದಿನ ರಾಜ್ಯದ ಜಲಾಶಯಗಳ ವಸ್ತುಸ್ಥಿತಿ ಬಗ್ಗೆ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸದ್ಯ ಕೆಆರ್ ಎಸ್ನಲ್ಲಿ (KRS) ನೀರಿನ ಮಟ್ಟ 29 ಟಿಎಂಸಿಗೆ ಇಳಿದಿದೆ. ತಮಿಳುನಾಡಿಗೆ 12,960 ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಮಧ್ಯೆ, ಬಾಗಿನಕ್ಕೆ ಮುನ್ನವೇ ಕಬಿನಿ ಜಲಾಶಯದಲ್ಲಿ 5.5 ಅಡಿಯಷ್ಟು ನೀರು ಖಾಲಿಯಾಗಿದೆ. ರಾಜ್ಯವನ್ನು ಬರಪೀಡಿತ ಎಂದು ಘೋಷಿಸುವಂತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.