ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಕೆ

ಮಂಗಳವಾರ, 18 ಏಪ್ರಿಲ್ 2023 (14:41 IST)
ರಾಜ್ಯ ವಿಧಾನಸಭಾ ಚುನಾವಣೆ, ಮಾಜಿ ಸಚಿವರು, ಶಾಸಕರಾದ ಶ್ರೀ ಎಸ್.ಸುರೇಶ್ ಕುಮಾರ್ ರವರು ಬಿಜೆಪಿ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಕೆ ಮಾಡಿದರು.ಶ್ರೀ ರಾಮಮಂದಿರ ವಾರ್ಡ್ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೇರುನಟ ಡಾ.ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ,  ಸಾವಿರಾರು ಬಿಜೆಪಿ ಕಾರ್ಯಕರ್ತರ ಜೊತೆಯಲ್ಲಿ ಪಾದಯಾತ್ರೆ ಮೂಲಕ ರಾಜಾಜಿನಗರ ಆರ್.ಟಿ.ಓ.ಕಛೇರಿ ವರಗೆ ತೆರಳಿ, ಬಿಬಿಎಂಪಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
 
ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ರಾಜಾಜಿನಗರ ಪ್ರಭಾರಿ ವಾಸು, ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು, ರಾಜಣ್ಣ,ಹೆಚ್.ಆರ್.ಕೃಷ್ಣಪ್ಪ,  ರವೀಂದ್ರನ್, ದೀಪಾ ನಾಗೇಶ್ ರವರು ಭಾಗವಹಿಸಿದ್ದರು.
 
ಎಸ್.ಸುರೇಶ್ ಕುಮಾರ್ ರವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಂಭಂದ.
 
1977ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರವಾಸ ಅಲ್ಲಿ ರಾಷ್ಟ್ರೀಯ ಮಟ್ಟದ ನಾಯಕರುಗಳ ಜೊತೆ ಒಡನಾಟ.
 
ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ, ನಂತರ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದರು.
 
ಬೆಂಗಳೂರುನಗರ ಯುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸೇವೆ.
 
1983 ಮತ್ತು 1990ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ.
 
ಐದು ಬಾರಿ ಶಾಸಕರಾಗಿ ಆಯ್ಕೆ 1994, 1999, 2008,2013, 2018.
 
 ಕಾನೂನು, ಸಂಸದೀಯ ವ್ಯವಹಾರಗಳು, ಜಲಮಂಡಳಿ, ಕಾರ್ಮಿಕ, ಶಿಕ್ಷಣ ಸಚಿವರಾಗಿ ಸೇವೆ.
 
2023ರಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ 6ನೇ ಬಾರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ.
 
ಮಂಡಲದ ಅಧ್ಯಕ್ಷರಾದ ರಾಘವೇಂದ್ರರಾವ್  ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಯಶಸ್ ನಾಯಕ್, ಸತೀಶ್ ಭಗವಾನ್ .ಚಲನಚಿತ್ರ ನಿರ್ಮಾಪಕ ಗಂಗಾಧರ್, ಗಿರೀಶ್ ಗೌಡ, ಕರಿಗಿರಿಗೋಪಿ, ವೆಂಕಟೇಶ್ ಬಾಬು, ರಮೇಶ್ ಬಾಬು, ಶ್ರೀನಾಥ್ ಆಯ್ಯರ್, ಕಿರಣ್, ಮುನ್ನಭಾಯಿ,ಆನಿಲ್ ರಂಗಣ್ಣ,ಮೋಹನ್ ರಾಜ್ , ಸಂಜಯ್ ಕುಮಾರ್, ಅಮಿತ್ ಜೈನ್, ಭರತ್ ಗಾಂಧಿ, ವೇಲು, ಪುಟ್ಚ, ಆದರ್ಶ್ ರವರುಗಳು ಭಾಗವಹಿಸಿದ್ದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ