ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಪಾರ್ಲಿಮೆಂಟ್ನಿಂದ ನನ್ನ ಅನರ್ಹ ಮಾಡಿದ್ರು : ರಾಹುಲ್ ಗಾಂಧಿ

ಮಂಗಳವಾರ, 18 ಏಪ್ರಿಲ್ 2023 (09:03 IST)
ಬೀದರ್ : ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಪಾರ್ಲಿಮೆಂಟ್ನಿಂದ ನನ್ನನ್ನು ಅನರ್ಹ ಮಾಡಿದರು, ಮಾತನಾಡಲು ಮೈಕ್ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾಲ್ಕಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
 
ಭಾಲ್ಕಿ ಪಟ್ಟಣದಲ್ಲಿ ನಡೆದ ಜನ ಕ್ರಾಂತಿ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ 40% ಕೊಡಬೇಕು. ಇಲ್ಲಾವಾದರೆ ನಿಮ್ಮ ಕೆಲಸಗಳು ಆಗಲ್ಲ. ಮೋದಿ ಸುಳ್ಳು ಹೇಳಿದಂತೆ ನಾವು ಸುಳ್ಳು ಹೇಳಲ್ಲ, ಯಾಕೆಂದರೆ 15 ಲಕ್ಷ ರೂ. ಹಾಕುತ್ತೇನೆ ಎಂದ ಮೋದಿ ಹಾಕಿದ್ರಾ? ಎಂದು ರಾಹುಲ್ ಪ್ರಶ್ನೆ ಮಾಡಿದರು.

40% ಸರ್ಕಾರ ಎಂದು ಹೇಳಿದ್ದ ಗುತ್ತಿಗೆದಾರ ಸಂಘದ ಪತ್ರಕ್ಕೆ ಇನ್ನೂ ಮೋದಿ ಉತ್ತರ ನೀಡಿಲ್ಲ. ಜೊತೆಗೆ ಪಿಎಸ್ಐ ಸೇರಿದಂತೆ ಬಹಳ ಹಗರಣಗಳು ಆಗಿವೆ. ಮತ್ತೆ ಮೋದಿ ಹೇಳುತ್ತಾರೆ ನಾವು ಭ್ರಷ್ಟಾಚಾರ ವಿರೋಧ ಇದ್ದೇವೆ ಎಂದು ಕುಟುಕಿದರು.

ಇದು 40% ಸರ್ಕಾರ. ಹೀಗಾಗೀ ಈ ಬಾರಿ ಬಿಜೆಪಿಗೆ 40 ಸೀಟು ಮಾತ್ರ ಕೊಡಿ. ಒಬಿಸಿ ಸರ್ವೆ ಬಹಿರಂಗ ಮಾಡಿ, ರಿಸರ್ವೇಶನ್ನಲ್ಲಿ 50% ಕ್ಯಾಪ್ ಮೀಸಲು ತೆಗೆಯಿರಿ, ದಲಿತ ಮತ್ತು ಒಬಿಸಿ ಅವರ ಮೀಸಲಾತಿ ಅವರಿಗೆ ಕೊಡಿ. ಆದರೆ ಮೋದಿ ಈ ಯಾವ ಕೆಲಸ ಮಾಡಲ್ಲ. ಅವರಿಗೆ ಒಬಿಸಿ ಮತ ಬೇಕು ಅಷ್ಟೇ ಎಂದು ತೀವ್ರ ವಾಗ್ದಾಳಿ ನಡೆಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ