ಬಿಜೆಪಿ ಯಾವುದೇ ವಿಚಾರ ಚರ್ಚೆ ಮಾಡಲು ಹಿಂದೇಟು ಹಾಕಲ್ಲ

ಭಾನುವಾರ, 9 ಜುಲೈ 2023 (18:30 IST)
ವಿಪಕ್ಷ ನಾಯಕ ನೇಮಕ ವಿಳಂಭ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರತಿಕ್ರಿಯಿಸಿದ್ದು, ನಮ್ಮ 66 ಶಾಸಕರು ವಿಧಾನಸಭೆಯಲ್ಲಿ, 34 ಶಾಸಕರು ಮೇಲ್ಮನೆಯಲ್ಲಿದ್ದಾರೆ.ಎಲ್ಲರೂ ಚರ್ಚೆಯನ್ನ ತೆಗೆದುಕೊಳ್ಳಲಿದಾರೆ.ಬಿಜೆಪಿ ಯಾವುದೇ ವಿಚಾರ ಚರ್ಚೆ ಮಾಡಲು ಹಿಂದೇಟು ಹಾಕಲ್ಲ.ವಿಪಕ್ಷ ನಾಯಕ ನೇಮಕ ಸ್ವಲ್ಪ ತಡ ಆಗಿದೆ.ಪ್ರತಿಯೊಬ್ಬ ಶಾಸಕರೂ ಕೂಡ ವಿಪಕ್ಷ
ನಾಯಕನ ರೀತಿಯಲ್ಲೇ ಸದನದಲ್ಲಿ ಚರ್ಚಿಸಲಿದ್ದಾರೆ.ಇವರು ಮಾಡಿರೋದು ಹಿಂದೂ ವಿರೋಧಿ ಬಜೆಟ್.ಮಠ, ಮಾನ್ಯಗಳಿಗೆ ಅನುದಾನ ನೀಡದೆ ಅಲ್ಪಸಂಖ್ಯಾತರಿಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
 
ಮದ್ಯಪಾನ ಪ್ರಿಯರಿಗೆ ಅತ್ಯಂತ ಮೋಸ ಆಗಿದೆ.ವಿಪರೀತ ಟ್ಯಾಕ್ಸ್ ಹಾಕಲಾಗಿದೆ.ಶಿಕ್ಷಣ ಸಂಸ್ಥೆಗಳಿಗೆ ನ್ಯಾಯ ಕೊಟ್ಟಿಲ್ಲ.ಲೋಕಸಭೆ ಗಮನದಲ್ಲಿಟ್ಟುಕೊಂಡು ಬಜೆಟ್ ಮಾಡಿದ್ದಾರೆ.ಕೇಂದ್ರ ಸರ್ಕಾರ ಟೀಕೆ ಮಾಡಲು ಮಾಡಿರೋ ಬಜೆಟ್ ರೀತಿ ಇದೆ.ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ಸಂದರ್ಭದಲ್ಲಿ ವಿಶ್ವವೇ ಗೌರವಿಸ್ತಿದೆ.ಆದ್ರೆ, ನಮ್ಮ ರಾಜ್ಯದ ಸಿಎಂ ಮಾತ್ರ ಮೋದಿಯನ್ನ ಟೀಕಿಸ್ತಿದ್ದಾರೆ.ಬಜೆಟ್‌ನಲ್ಲಿ ಟ್ಯಾಕ್ಸ್ ಹೆಚ್ಚಳ ಮಾಡಿದ್ದಾರೆ, 85 ಸಾವಿರ ಕೋಟಿ ಸಾಲ ಮಾಡಿದ್ದಾರೆ.ಎಲ್ಲಾ ವಿಚಾರವನ್ನ ತೆಗೆದು ಟೀಕಿಸುವ ಕೆಲಸವನ್ನ ಬಿಜೆಪಿ ಮಾಡಲಿದೆ‌ ಎಂದು ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ