ಪ್ರಾಥಮಿಕ ಹ೦ತದ ಮತದಾನ ಹಾಗೂ ಹಲವು ಸುತ್ತಿನ ಮಾತುಕತೆ ಬಳಿಕ ರಾಜ್ಯ ಬಿಜೆಪಿ, ಚುನಾವಣಾ ಸಮಿತಿ
ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಸದ್ಯ ರಾಜ್ಯಾಧ್ಯಕ್ಷರ ಕೈಗೆ ಪಟ್ಟಿ ತಲುಪಿಸಿದೆ. ಈ ಹಿನ್ನೆಲೆ ಇಂದೇ ಹೈಕಮಾಂಡ್ ಅಂಗಳಕ್ಕೆ ಪಟ್ಟಿ ರವಾನೆಯಾಗಲಿದೆ. ರಾಜ್ಯ ಚುನಾವಣಾ ಸಮಿತಿ ಎರಡು ದಿನಗಳ ಕಾಲ ಸುದೀರ್ಘವಾಗಿ ಚರ್ಚಿಸಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಶೇಕಡಾ 85ರಷ್ಟು ಹಾಲಿ ಶಾಸಕರಿಗೆ ಟಿಕೆಟ್ ದೃಢಪಡಿಸಿದೆ. 80ರಿಂದ 90 ಕ್ಷೇತ್ರಗಳಲ್ಲಿ ಒಬ್ಬರೇ ಅಭ್ಯರ್ಥಿಯ ಹೆಸರನ್ನು ಸೂಚಿಸಲಾಗಿದೆ. 20 ರಿಂದ 25 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಬಗ್ಗೆಯೂ ಚರ್ಚೆ ನಡೆದಿದ್ದು. ಭ್ರಷ್ಟಾಚಾರ ಆರೋಪ, ಕಾರ್ಯಕರ್ತರ ವಿರೋಧ, ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರುವ, ಶಾಸಕರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡುವ ಪ್ಲಾನ್ ಮಾಡಲಾಗಿದೆ. ಇದೇ ವೇಳೆ, ಸರ್ವೆ, ಆಂತರಿಕ ಮತದಾನ, ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ವಿಶ್ವಾಸ ಇಲ್ಲದಿರುವ ಶಾಸಕರಿಗೂ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಕಳುಹಿಸಿರುವ ಪಟ್ಟಿಯನ್ನು ಹೈಕಮಾಂಡ್ ಏಪ್ರಿಲ್ 7 ಮತ್ತು 8ರಂದು ಪರಿಶೀಲಿಸಿ 9 ರಂದು ಪಟ್ಟಿ ಬಿಡುಗಡೆ ಮಾಡುವುದು ಬಹುತೇಕ ಪಕ್ಕಾ ಆಗಿದೆ.