ಹೊಸಕೋಟೆಯಲ್ಲಿ ಮಗನನ್ನ ಗೆಲ್ಲಿಸಲು ಎಂಟಿಬಿ ರಣತಂತ್ರ
ರಾಜ್ಯ ವಿಧಾನಸಭಾ ಚುನಾವಣೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಮಗನನ್ನ ಗೆಲ್ಲಿಸಲು ಎಂಟಿಬಿ ರಣತಂತ್ರ ಎಣೆಯುತ್ತಿದ್ದಾರೆ. ಇನ್ನೂ ಬಿಜೆಪಿ ಟಿಕೆಟ್ ಘೋಷಣೆ ಮುನ್ನವೇ ಕ್ಷೇತ್ರದಲ್ಲಿ ಆಪರೇಷನ್ ಕಮಲ ಶುರುಮಾಡಲಾಗಿದೆ. ಸಂಸದ ಬಿಎನ್ ಬಚ್ಚೇಗೌಡರ ಆಪ್ತ ಹುಲ್ಲೂರು ಮಂಜುನಾಥ್ ರನ್ನ ಬಿಜೆಪಿಗೆ ಎಂಟಿಬಿ ಕರೆತಂದಿದ್ದಾರೆ. ಈ ಭಾರಿ ಮಗನನ್ನ ಬಿಜೆಪಿ ಅಭ್ಯರ್ಥಿ ಮಾಡಿ ಗೆಲ್ಲಿಸುವ ತಂತ್ರ ಮಾಡಿರುವ ಸಚಿವ ಎಂಟಿಬಿ ನಾಗರಾಜ್, ಸಂಸದ ಬಚ್ಚೇಗೌಡ ಆಪ್ತ ಪ್ರಮುಖ ಮುಖಂಡನಿಗೆ ಗಾಳ ಹಾಕಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಬಚ್ಚೇಗೌಡ ಕಾಲದಿಂದಲು ಅವರ ಜೊತೆಯಲ್ಲೆ ಗುರುತಿಸಿಕೊಂಡಿದ್ದ ಹುಲ್ಲೂರು ಮಂಜುನಾಥ್ ಇದೀಗ ಚುನಾವಣೆ ಬೆನ್ನಲ್ಲೆ ಎಂಟಬಿ ಪರ ಸೇರ್ಪಡೆಗೊಂಡಿದ್ದಾರೆ. ಇನ್ನೂ ಆ ಮೂಲಕ ಶಾಸಕ ಶರತ್ ಗೆ ಟಾಂಗ್ ಸಚಿವ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ಮತ್ತಷ್ಟು ಜನ ಪ್ರಮುಖ ಮುಖಂಡರಿಗೆ ಎಂಟಿಬಿ ಗಾಳ ಹಾಕಿದ್ದು, ಈ ಭಾರಿ ಮಗ ನಿತೀನ್ ಪುರುಷೋತ್ತಮ್ರನ್ನ ಶತಾಯಗತಾಯ ಗೆಲ್ಲಿಸಿ ರಾಜಕೀಯ ನೆಲೆ ನೀಡಲು ಎಂಟಿಬಿ ರಣತಂತ್ರ ಹೂಡಿದ್ದಾರೆ. ಹೀಗಾಗೆ ಹೈಕಮಾಂಡ್ ಬಳಿಯು ಮಗನಿಗೆ ಟಿಕೇಟ್ ನೀಡುವಂತೆ ಪಟ್ಟು ಸಚಿವ ಎಂಟಿಬಿ ನಾಗರಾಜ್ ಪಟ್ಟು ಕೂಡ ಇಡಿದಿದ್ದಾರೆ. ಹೀಗಾಗಿ ಹೊಸಕೋಟೆಯಲ್ಲಿ ಹೊಸ ತಲೆಮಾರಿನ ರಾಜಕೀಯ ರಂಗೇರಲಿದೆ. ಈ ಭಾರಿಯ ಚುನಾವಣೆಯಲ್ಲಿ ಎಂಟಿಬಿ ಮತ್ತು ಬಚ್ಚೇಗೌಡ ಮಕ್ಕಳ ಕಾಳಗ ನಡೆಯಲಿದ್ದು, ವಿಜಯಮಾಲೆ ಧರಿಸಬೇಕು ಅಂತ ಎರಡು ಕಡೆಯಿಂದ ಭಾರಿ ರಣತಂತ್ರ ಹೂಡಲಾಗ್ತಿದೆ.