ಏಪ್ರಿಲ್ 11ರಂದು ಬಿಜೆಪಿ ಫಸ್ಟ್ ಲಿಸ್ಟ್ ರಿಲೀಸ್..?

ಮಂಗಳವಾರ, 11 ಏಪ್ರಿಲ್ 2023 (07:08 IST)
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳಲು ಮೂರು ದಿನಗಳು ಬಾಕಿ ಉಳಿದಿದೆ. ಆದರೂ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಎರಡು ದಿನಗಳಿಂದಲೂ ದೆಹಲಿಯಲ್ಲಿ ಸಾಲು ಸಾಲು ಸಭೆ ನಡೆದಿದ್ದರೂ, ಮೊದಲ ಪಟ್ಟಿ ಬಿಡುಗಡೆ ಕಗ್ಗಂಟಾಗಿಯೇ ಉಳಿದಿದೆ.
 
ಭಾನುವಾರ 170-180 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ, ರಿಲೀಸ್ ಆಗೋದಷ್ಟೇ ಬಾಕಿಯಿದೆ ಎನ್ನಲಾಗಿತ್ತು. ಆದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಿಸಿದೆ. ಸೋಮವಾರ ಬೆಳ್ಳಂಬೆಳಗ್ಗೆ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ ಅಮಿತ್ ಶಾ, ಸುಮಾರು 40 ಕ್ಷೇತ್ರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದರು.

ರಾಜ್ಯ ನಾಯಕರು ನಡೆಸಿದ ಸರ್ವೆ ಮತ್ತು ಕೇಂದ್ರದಿಂದ ನಡೆದ ಸರ್ವೆಯಲ್ಲಿ ವ್ಯತಾಸಗಳಿದ್ದು ಈ ಬಗ್ಗೆ ಮತ್ತೊಂದು ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯವಾಗಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಮತ್ತು ಹಾಲಿ ಶಾಸಕರನ್ನು ಮುಂದುವರಿಸುವ ವಿಚಾರದಲ್ಲಿ ಗೊಂದಲವಿದೆ. ಹೀಗಾಗಿಯೇ ಸಿಇಸಿಯಲ್ಲಿ ಅನುಮತಿ ಸಿಕ್ಕಿದ್ದ ಪಟ್ಟಿಯನ್ನ ಪ್ರಕಟಿಸದಂತೆ ಅಮಿತ್ ಶಾ ತಡೆ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ