ಕೊರೋನಾ ಮೂರನೇ ಅಲೆಯ ಹರಡುವಿಕೆ ಈ ಹಿಂದಿನ ಎರಡು ಅಲೆಗಳಿಗಿಂತ ತೀವ್ರವಾಗಿದೆ. ಈ ಬಾರಿ ಅನೇಕ ಮಂದಿ ಗಣ್ಯರು, ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು.
ರಾಜ್ಯ ಸಚಿವ ಸಂಪುಟದ ಸಚಿವರುಗಳಾದ ಆರ್ ಅಶೋಕ್ ಮತ್ತು ಬಿ ಸಿ ನಾಗೇಶ್ ಅವರಿಗೆ ಕೊರೋನಾ ಪಾಸಿಟಿವ್ ಬಂದು ಗುಣಮುಖರಾಗುತ್ತಿದ್ದಾರೆ.