ಬಿಜೆಪಿಗೆ ಯಾವುದರ ಅರಿವು ಇಲ್ಲಾ-ದಿನೇಶ್ ಗುಂಡೂರಾವ್

ಭಾನುವಾರ, 27 ಮಾರ್ಚ್ 2022 (16:24 IST)
ಸಿದ್ದರಾಮಯ್ಯನವರು ಹೇಳಿದ್ದು, ದುಪ್ಪಟ್ಟನ್ನ ಅನೇಕರು ಅನೇಕ ರೀತಿಯಲ್ಲಿ ಹಾಕೊತಾರೆ, ಹೆಂಗಸರು ಹಾಕೊತಾರೆ, ಸ್ವಾಮಿಜಿಯವರು ಹಾಕೊತಾರೆ ಎಂದು ಹೇಳಿದ್ದಾರೆ. ಅವರು ಯಾರ ವಿರುದ್ಧವೂ ಮಾತನಾಡಿಲ್ಲ, ಯಾರಾದರೂ ಸ್ವಾಮಿಜಿಯವರ ಬಗ್ಗೆ ಮಾತಾಡ್ತಾರಾ?
ಬಿಜೆಪಿಯವರಿಗೆ ಇಂತಹ ವಿಚಾರಗಳೆ ಬೇಕು, ಮಕ್ಕಳ ವಿದ್ಯಾಭ್ಯಾಸ, ಬೆಲೆಏರಿಕೆಯ ಬಗ್ಗೆ ಮಾತನಾಡುತ್ತಾರ? ಕಾಶ್ಮೀರ ಫೈಲ್ಸ್, ಹಿಜಬ್, ಇಂತಹ ವಿಚಾರಗಳೇ ಅವರಿಗೆ ಬೇಕಾಗಿರೋದು, ಎಂದು ಬೆಂಗಳೂರಿನಲ್ಲಿ ದಿನೇಶ್ ಗುಂಡೂರಾವ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾನ್ಯ ವಿಚಾರವನ್ನು ವಿವಾದ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸೊದು, ಮಾಧ್ಯಮಗಳಲ್ಲಿ ಹಾಕಿಸೋದೆ ಬಿಜೆಪಿಯ ಕೆಲಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ