ಬಿಜೆಪಿ ಪಾದಯಾತ್ರೆ ಎರಡನೇ ದಿನಕ್ಕೆ…
ಶುಕ್ರವಾರ, 27 ಜುಲೈ 2018 (15:10 IST)
ರೈತರ ಸಂಪೂರ್ಣ ಸಾಲಮನ್ನಕ್ಕೆ ಆಗ್ರಹಿಸಿ ರಾಮನಗರ ಜಿಲ್ಲಾ ಬಿಜೆಪಿ ವತಿಯಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಚನ್ನಪಟ್ಟಣದ ಕೆಂಗಲ್ ಆಂಜನೇಯ ದೇವಾಲಯದಿಂದ ಹೊರಟಿದ್ದ ಪಾದಯಾತ್ರಿಗಳು ಸಂಜೆ ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಂಗಿದ್ದು, ಬಿಡದಿಯ ಬಾಲಗಾಂಗಧರನಾಥಸ್ವಾಮಿ ಪುತ್ತಳಿಗೆ ಮಾಲರ್ಪಣೆ ಮಾಡಿ, ತಮ್ಮ ಎರಡನೇ ದಿನದ ಪಾದಯಾತ್ರೆ ಆರಂಭಿಸಿದ್ರು. ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್, ಬಿಜೆಪಿ ಮುಖಂಡ ಕೆ.ಶಿವರಾಮ್ ನೇತೃತ್ವದಲ್ಲಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮಹಿಳೆಯರು ಬೆಂಗಳೂರಿನತ್ತ ಪಾದಯಾತ್ರೆ ಆರಂಭಿಸಿದ್ರು.
ಈ ವೇಳೆ ಮಾತನಾಡಿದ ರುದ್ರೇಶ್, ಹೆಚ್.ಡಿ.ಕುಮಾರಸ್ವಾಮಿ ಅವ್ರು ನಮ್ಮ ಪಾದಯಾತ್ರೆಯನ್ನ ವ್ಯಂಗ್ಯ ಮಾಡಿದ್ದಾರೆ ಅದು ಯಾವ ಅರ್ಥದಲ್ಲಿ ಮಾಡಿದ್ದಾರೆ ನನಗೆ ಗೊತ್ತಿಲ್ಲಾ. ಬಿಜೆಪಿ ಪಕ್ಷ ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡಿ ಅಂತಾ ಕೇಳಿಕೊಂಡಿರಲಿಲ್ಲಾ. ಸ್ವತಃ ಅವರೇ ಘೋಷಣೆ ಮಾಡಿಕೊಂಡಿದ್ರು. ಹಾಗಾಗೀ ಅವರು ನುಡಿದಂತೆ ನಡೆದುಕೊಳ್ಳಲಿ ಅಂತಾ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ ಎಂದಿದ್ದಾರೆ.