ರಾಹುಲ್ ಗಾಂಧಿಯನ್ನು ತಬ್ಬಿಕೊಂಡ್ರೆ ನಮ್ಮ ಪತ್ನಿ ಡಿವೋರ್ಸ್ ಕೊಡ್ತಾಳೆ ಅಷ್ಟೆ! ಹೀಗಂದವರು ಯಾರು ಗೊತ್ತಾ?!
ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ ರಾಹುಲ್ ಗಾಂಧಿ ಅಪ್ಪಿಕೊಂಡ ಬಗೆಯನ್ನು ಲೇವಡಿ ಮಾಡಿದ್ದು, ‘ನಮಗೆ ರಾಹುಲ್ ಗಾಂಧಿ ತಬ್ಬಿಕೊಂಡರೆ ಭಯವಾಗುತ್ತದೆ. ರಾಹುಲ್ ನಮ್ಮನ್ನು ತಬ್ಬಿಕೊಂಡರೆ ನಮ್ಮ ಪತ್ನಿ ನಮಗೆ ಡಿವೋರ್ಸ್ ಕೊಟ್ಟು ಬಿಟ್ಟು ಹೋಗಬಹುದು’ ಎಂದಿದ್ದಾರೆ.
‘ಒಂದು ವೇಳೆ ರಾಹುಲ್ ಮದುವೆಯಾದರೆ ಆಗ ಅವರನ್ನು ತಬ್ಬಿಕೊಳ್ಳುತ್ತೇವೆ’ ಎಂದು ದುಬೆ ತಮಾಷೆ ಮಾಡಿದ್ದಾರೆ. ರಾಹುಲ್ ಕೂಡಾ ಇತ್ತೀಚೆಗೆ ನನ್ನನ್ನು ತಬ್ಬಿಕೊಳ್ಳಲು ಬಿಜೆಪಿ ಸಂಸದರು ಹಿಂದೇಟು ಹಾಕುತ್ತಿದ್ದಾರೆ ಎಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.