ಕೊಪ್ಪಳ ಕ್ಷೇತ್ರದಿಂದ ಶಾಸಕ ಶ್ರೀರಾಮುಲುರನ್ನ ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ
ಮಂಗಳವಾರ, 26 ಮಾರ್ಚ್ 2019 (13:03 IST)
ಕೊಪ್ಪಳ : ಕೊಪ್ಪಳದಿಂದ ಮೊಳಕಾಲ್ಮುರು ಶಾಸಕ ಶ್ರೀರಾಮುಲುರನ್ನ ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಸೋಮವಾರ ತಡರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ವರಿಷ್ಠರು, ಕೊಪ್ಪಳದಿಂದ ಶ್ರೀರಾಮುಲು ಅವರು ಸ್ಪರ್ಧಿಸಿದರೆ ಕೊಪ್ಪಳ, ಬಳ್ಳಾರಿ, ರಾಯಚೂರು, ಹಾವೇರಿ-ಗದಗ, ಬಾಗಲಕೋಟೆ ಕ್ಷೇತ್ರಗಳಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಆದರಿಂದ ಶ್ರೀರಾಮುಲುಗೆ ಕೊಪ್ಪಳದಿಂದ ಕಣಕ್ಕೆ ಇಳಿಯಲು ಒತ್ತಾಯ ಮಾಡುತ್ತಿದ್ದಾರಂತೆ.
ಈಗಾಗಲೇ ಕೊಪ್ಪಳ ಲೋಕಸಭೆ ಟಿಕೆಟ್ ಗಾಗಿ ಹಾಲಿ ಸಂಸದ ಕರಡಿ ಸಂಗಣ್ಣ, ಸಿ.ವಿ ಚಂದ್ರಶೇಖರ್, ಡಾ.ಕೆ ಬಸವರಾಜ ತೀವ್ರ ಕಸರತ್ತು ನಡೆಯುತ್ತಿದ್ದಾರೆ. ಆದರೆ ಈ ಕಡೆ ಸ್ಪರ್ಧೆ ಮಾಡುವಂತೆ ವರಿಷ್ಠರಿಂದ ತೀವ್ರ ಒತ್ತಡ ಎದರುಸುತ್ತಿರುವ ಶ್ರೀರಾಮುಲು ಅವರು ಲೋಕಸಭೆ ಸ್ಪರ್ಧೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನುವ ಮಾಹಿತಿ ದೊರಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.