ಬೆಂಗಳೂರು: ಬಿಜೆಪಿ ಮುಖಂಡ, ವಕೀಲ ಜಿ.ದೇವರಾಜೇಗೌಡ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ದೂರು ದಾಖಲಿಸಿದ ಬೆನ್ನಲ್ಲೇ ಬಿಜೆಪಿ ನಾಯಕರಿಗಾಗಿಯೇ ಕಳಚಲಾಗದ ಪ್ಯಾಂಟನ್ನು ವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.
ಸಂಸದ ಪ್ರಜ್ಬಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ಬಿಜೆಪಿ ನಾಯಕ ದೇವರಾಜೇಗೌಡ ವಿರುದ್ಧ ಹೊಳೆನರಸೀಪುರ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಪಕ್ಷ ಇದೀಗ ಬಿಜೆಪಿಯನ್ನು ಲೇವಾಡಿ ಮಾಡಿ ಪೋಸ್ಟ್ ಮಾಡಿದೆ.
ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಸಂಸದ ಪ್ರಜ್ವಲ್ ರೇವಣ್ಣ ಅವರು ಹಲವು ಮಹಿಳೆಯರ ಜತೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಆರೋಪ ಮಾಡಿದ ದೇವರಾಜೇಗೌಡ ವಿರುದ್ಧವೂ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಮೂಲಕ ಬಿಜೆಪಿ ನಾಯಕರ ಕೈ, ಬಾಯಿ, ಚಾರಿತ್ರ್ಯ ಯಾವುದೂ ಶುದ್ಧವಿಲ್ಲದಿರುವುದಕ್ಕೆ ಮತ್ತೊಂದು ನಿದರ್ಶನವಿದು. ಬಿಜೆಪಿ ನಾಯಕರಿಗಾಗಿಯೇ ಕಳಚಲಾಗದ ಪ್ಯಾಂಟ್‌ನ್ನು ವಿನ್ಯಾಸಗೊಳಿಸಬೇಕೆಂದು ಹೇಳಿದ್ದಾರೆ.
ಪೋಸ್ಟ್ ಹೀಗಿದೆ: ಪ್ರಜ್ವಲ್ ಕರ್ಮಕಾಂಡಗಳ ಬಗ್ಗೆ ಮಾತಾಡುತ್ತಿದ್ದ ಬಿಜೆಪಿಯ ದೇವರಾಜೇಗೌಡ ಕೂಡ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ದಾಖಲಾಗಿದೆ. @BJP4Karnataka ನಾಯಕರ ಕೈ, ಬಾಯಿ, ಚಾರಿತ್ರ್ಯ ಯಾವುದೂ ಶುದ್ಧವಿಲ್ಲದಿರುವುದಕ್ಕೆ ಮತ್ತೊಂದು ನಿದರ್ಶನವಿದು. ಬಿಜೆಪಿ ನಾಯಕರಿಗಾಗಿಯೇ ಕಳಚಲಾಗದ ಪ್ಯಾಂಟನ್ನು ವಿನ್ಯಾಸಗೊಳಿಸುವ ಅಗತ್ಯವಿದೆ!!