'ನಾನು ಕಪ್ಪು ಬಣ್ಣದ ಭಾರತೀಯ': ಫೋಟೋ ಹಂಚಿ ಪಿತ್ರೋಡಾ ಹೇಳಿಕೆಗೆ ಅಣ್ಣಾಮಲೈ ತಿರುಗೇಟು

Sampriya

ಬುಧವಾರ, 8 ಮೇ 2024 (18:40 IST)
Photo Courtesy X
ಚೆನ್ನೈ: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ದಕ್ಷಿಣ ಭಾರತೀಯರನ್ನು ಆಫ್ರಿಕಾದವರಿಗೆ ಹೋಲಿಕೆ ಮಾಡಿದ ಬೆನ್ನಲ್ಲೇ 'ನಾನು ಕಪ್ಪು ಬಣ್ಣದ ಭಾರತೀಯ' ಎಂದು ಹೇಳುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಿರುಗೇಟು ನೀಡಿದರು.

ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ಟೀಕೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆ ದುರದೃಷ್ಟಕರವಾಗಿದೆ. ಯಾಕೆಂದರೆ ಆಫ್ರಿಕನ್ನರು, ಚೈನೀಸ್, ಅರಬ್ಬರು, ಬಿಳಿಯರು ಇದನ್ನು ನಾನು ತಪ್ಪು ಎಂದು ಹೇಳುತ್ತಿಲ್ಲ, ಪರವಾಗಿಲ್ಲ. ಅವರು ತಮ್ಮದೇ ಆದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಆದರೆ ಅವರ ಅರ್ಥವೇನೆಂದರೆ, ಯಾರೋ ನಮ್ಮ ದೇಶವನ್ನು ಆಕ್ರಮಿಸಿದ್ದಾರೆ ಮತ್ತು ನಾವು ಆ ದಾಳಿಕೋರರ ವಂಶಸ್ಥರು. ಅದಕ್ಕಾಗಿಯೇ ಪಶ್ಚಿಮ ಅರಬ್, ಈಶಾನ್ಯ ಅವರು ಚೈನೀಸ್ ಎಂದು ಕರೆಯುತ್ತಾರೆ. ಉತ್ತರವನ್ನು ಅವರು ಬಿಳಿಯರು ಮತ್ತು ದಕ್ಷಿಣವನ್ನು ಅವರು ಆಫ್ರಿಕನ್ನರು ಎಂದು ಕರೆಯುತ್ತಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಅದಕ್ಕಾಗಿಯೇ ನಾನು ಈಗ ನನ್ನ ಎಕ್ಸ್‌ ಖಾತೆಯಲ್ಲಿಯೂ ಉಲ್ಲೇಖಿಸಿದ್ದೇನೆ ಎಂದರು.

ಸ್ಯಾಮ್ ನೀಡಿದ ವಿವಾದಾತ್ಮಕ ಹೇಳಿಕೆ ಹೀಗಿದೆ:   ದೇಶದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮ ಭಾಗದವರು ಅರಬ್​ರಂತೆ, ಉತ್ತರ ಭಾಗದವರು ಬಿಳಿಯರಂತೆ ಹಾಗೂ ದಕ್ಷಿಣ ಭಾರತದ ಜನರು ಆಫ್ರಿಕಾದವರಂತೆ ಕಾಣುತ್ತಾರೆ ಎಂದು ಹೇಳಿ ಕಿಡಿ ಹೊತ್ತಿಸಿದ್ದರು.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಪೋಟೋ ಹಂಚಿಕೊಂಡ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಡಿಯರ್ ಸ್ಯಾಮ್ ಪಿತ್ರೋಡಾ ಅವರೇ, ನಾನು ಕಪ್ಪು ಬಣ್ಣದ ಭಾರತೀಯ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ