ಅಂಗನವಾಡಿ ಫುಡ್ ಕಿಟ್ ನಲ್ಲಿ ಬಿಜೆಪಿ ರಾಜಕೀಯ; ಈ ಬಗ್ಗೆ ಬಿಜೆಪಿ ನಾಯಕ ಹೇಳಿದ್ದೇನು?
ಶನಿವಾರ, 2 ಮೇ 2020 (10:22 IST)
ಬೆಂಗಳೂರು : ಅಂಗನವಾಡಿ ಫುಡ್ ಕಿಟ್ ನಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂಬ ಆರೋಪಕ್ಕೆ ಆನೇಕಲ್ ಬಿಜೆಪಿ ನಾಯಕ ಮುನಿರಾಜು ಸ್ಪಷ್ಟನೆ ನೀಡಿದ್ದಾರೆ.
ನಮ್ಮಿಂದ ಯಾವುದೇ ಲೋಪ ನಡೆದಿಲ್ಲ. ಪ್ಯಾಕ್ ಮಾಡಲು ಎಂಎಸ್ ಪಿಸಿ ಗೆ ಕೊಟ್ಟಿದ್ದು ನಿಜ. ಜನರಿಗೆ ಹಂಚಲು ಪ್ಯಾಕ್ ಮಾಡಲು ಕೊಟ್ಟಿದೆ. ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಬಿಜೆಪಿ ಮುಖಂಡ ಮುನಿರಾಜು ತಿಳಿಸಿದ್ದಾರೆ.
ಅಂಗನವಾಡಿ ಫುಡ್ ಕಿಟ್ ನಲ್ಲಿ ಬಿಜೆಪಿ ರಾಜಕೀಯ ಮಾಡಿದೆ. ಕೇಂದ್ರ ಸರ್ಕಾರ ಕೊಟ್ಟ ಫುಡ್ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ನಿಯಮ ಉಲ್ಲಂಘಿಸಿ ಬಿಜೆಪಿ ಫುಡ್ ಕಿಟ್ ಹಂಚಿಕೆ ಮಾಡಿದೆ ಎಂದು ಆರೋಪ ಮಾಡಿದ್ದಾರೆ.