ಬಸನಗೌಡ ಪಾಟೀಲ್ ಯತ್ನಾಳ್ ಟೀಂ ವರ್ಸಸ್ ಬಿವೈ ವಿಜಯೇಂದ್ರ ಟೀಂ ವಾರ್ ಹೈಕಮಾಂಡ್ ಅಂಗಳಕ್ಕೆ

Krishnaveni K

ಮಂಗಳವಾರ, 26 ನವೆಂಬರ್ 2024 (10:51 IST)
ಬೆಂಗಳೂರು: ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿ ನಾಯಕ ದುಮ್ಮಾನ ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ವಕ್ಫ್ ಹೋರಾಟ ವಿಚಾರದಲ್ಲಿ ರಾಜ್ಯ ಬಿಜೆಪಿ ಎರಡು ಬಣವಾಗಿದೆ. ಇದೀಗ ಯತ್ನಾಳ್ ವಿರುದ್ಧ ವಿಜಯೇಂದ್ರ ಬಣ ದೆಹಲಿಗೆ ತೆರಳಿ ಹೈಕಮಾಂಡ್ ಗೆ ದೂರು ಸಲ್ಲಿಸಲು ತೀರ್ಮಾನಿಸಿದೆ.

ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ವಿರುದ್ಧ ಯತ್ನಾಳ್ ಆಂಡ್ ಟೀಂ ಮೊದಲಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇವರಿಬ್ಬರ ಒಡಕು ರಾಜ್ಯದಲ್ಲಿ ನಡೆದಿದ್ದ ಉಪಚುನಾವಣೆ ಮೇಲೂ ಪರಿಣಾಮ ಬೀರಿದೆ. ಉಪಚುನಾವಣೆ ಸೋಲಿನ ಬಳಿಕ ಯತ್ನಾಳ್ ಬಹಿರಂಗವಾಗಿ ಈ ಸೋಲಿಗೆ ಯಡಿಯೂರಪ್ಪ ಮತ್ತು ಮಕ್ಕಳೇ ಕಾರಣ ಎಂದಿದ್ದರು.

ಇದೀಗ ವಕ್ಫ್ ವಿರುದ್ಧವಾಗಿ ವಿಜಯೇಂದ್ರ ಬಣ ತಮ್ಮನ್ನು ಕಡೆಗಣಿಸಿರುವುದಕ್ಕೆ ಪ್ರತ್ಯೇ ತಂಡ ರಚಿಸಿ ಯತ್ನಾಳ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ವಕ್ಫ್ ವಿರುದ್ಧ ಒಂದೆಡೆ ರಾಜ್ಯ ಸರ್ಕಾರದ  ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಬಿಜೆಪಿಯೇ ಒಡೆದ ಮನೆಯಂತಾಗಿದೆ.

ದೆಹಲಿಯಲ್ಲಿ ಈಗ ಕೇಂದ್ರ ನಾಯಕರು ಸಂಸತ್ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ದರೂ ಯತ್ನಾಳ್ ವಿರುದ್ಧ ದೂರು ನೀಡಲು ಮುಂದಾಗಿದ್ದು ಈ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒತ್ತಾಯಿಸಲಿದೆ. ಈಗ ಹೈಕಮಾಂಡ್ ರಾಜ್ಯ ಬಿಜೆಪಿಯ ಒಡಕಿಗೆ ಹೇಗೆ ತೇಪೆ ಹಚ್ಚುತ್ತದೆ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ