ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳಕ್ಕೆ ಕಾರಣ ನೀಡಿದ ದಿನೇಶ್ ಗುಂಡೂರಾವ್‌

Sampriya

ಗುರುವಾರ, 21 ನವೆಂಬರ್ 2024 (18:56 IST)
Photo Courtesy X
ಬೆಂಗಳೂರು:  ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿರುವುದು ಆಸ್ಪತ್ರೆಗಳ ಅಭಿವೃದ್ಧಿಗೆ ಹೊರೆತು ಬಿಜೆಪಿ ನಾಯಕರ ಸುಳ್ಳುಗಳಂತೆ ಗ್ಯಾರಂಟಿ ಯೋಜನೆಗಳಿಗಲ್ಲ. ಸರ್ಕಾರದ ಎಲ್ಲಾ ದರ ಪರಿಷ್ಕರಣೆಗಳಿಗೂ ಗ್ಯಾರಂಟಿ ಯೋಜನೆಗಳ ಜೊತೆಗೆ ತಳುಕು ಹಾಕುವುದು ಬಿಜೆಪಿ ನಾಯಕರಿಗೆ ಮಾಮೂಲಿ ಕೆಲಸವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಹೀಗಿದೆ:  ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿರುವುದು ಆಸ್ಪತ್ರೆಗಳ ಅಭಿವೃದ್ಧಿಗೆ ಹೊರೆತು ಬಿಜೆಪಿ ನಾಯಕರ ಸುಳ್ಳುಗಳಂತೆ ಗ್ಯಾರಂಟಿ ಯೋಜನೆಗಳಿಗಲ್ಲ. ಸರ್ಕಾರದ ಎಲ್ಲಾ ದರ ಪರಿಷ್ಕರಣೆಗಳಿಗೂ ಗ್ಯಾರಂಟಿ ಯೋಜನೆಗಳ ಜೊತೆಗೆ ತಳುಕು ಹಾಕುವುದು
ಬಿಜೆಪಿ ನಾಯಕರಿಗೆ ಮಾಮೂಲಿ ಕೆಲಸವಾಗಿದೆ.

ರಾಜ್ಯದಲ್ಲಿ ಹಲವು ವರ್ಷಗಳ ಬಳಿಕ ಆಸ್ಪತ್ರೆಗಳ ಸೇವಾ ಶುಲ್ಕ ಪರಿಷ್ಕರಿಸಲಾಗಿದೆ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಹಣ ಆಸ್ಪತ್ರೆಗಳ ʼಆರೋಗ್ಯ ರಕ್ಷಾ ಸಮಿತಿʼಗೆ ಸೇರಲಿದೆ. ಈ ಸೇವಾ ಶುಲ್ಕ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆಯಾಗಲಿದೆ. ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವ ಸೇವಾ ಶುಲ್ಕ ರಾಜ್ಯದ ಜನತೆಗೆ ಹೊರೆಯಾಗುವುದಿಲ್ಲ.

ಆದರೂ, ಬಿಜೆಪಿ ನಾಯಕರು ಮಾತ್ರ ಎಲ್ಲಾ ವಿಚಾರಗಳಿಗೂ ಗ್ಯಾರಂಟಿ ಯೋಜನೆಗಳನ್ನೆ ಮುಂದಕ್ಕೆ ತರುತ್ತಿದ್ದಾರೆ. ಜನರಿಂದ ಪ್ರಶಂಸೆಗೆ ಒಳಗಾಗಿರುವ ಈ ಯೋಜನೆಗಳ ಬಗ್ಗೆ ಸುಳ್ಳು, ಅಪಪ್ರಚಾರ ನಡೆಸುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದಾರೆ ಬಿಜೆಪಿ ನಾಯಕರು. ಆದರೆ, ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಅನುದಾನಗಳು, ನಬಾರ್ಡ್‌ನಿಂದ ರೈತರಿಗೆ ಬರಬೇಕಾದ ಹಣದ ಕುರಿತು ತುಟಿ ಬಿಚ್ಚುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ