ನಾಳೆಯಿಂದ ಬಿಜೆಪಿ ರಥ ಯಾತ್ರೆ ಆರಂಭ

ಮಂಗಳವಾರ, 28 ಫೆಬ್ರವರಿ 2023 (20:53 IST)
ವಿಧಾನ ಸಭೆ ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಎಲ್ಲ ಪಕ್ಷಗಳು ತಮ್ಮದೇ ತಯಾರಿಯಲ್ಲಿ ತೊಡಗಿಕೊಂಡಿವೆ .ಆಶ್ವಾಸನೆ ಮೇಲೆ ಆಶ್ವಾಸನೆ ಕೊಡುತ್ತಿರುವ ಸರ್ಕಾರಗಳು ರ್ಯಾಲಿ, ರೋಡ್ ಶೋ, ಸಮಾವೇಶ ಅಂತ ಫುಲ್‌ ಬ್ಯುಸಿಯಾಗಿವೆ.2023ರ ಚುನಾವಣೆ ಸಮೀಪ ಇದ್ದು, ಹೆಚ್ ಡಿ ಕುಮಾರಸ್ವಾಮಿ ಪಂಚರತ್ನಯಾತ್ರೆ ಮಾಡಿದ್ರೆ , ಕಾಂಗ್ರೆಸ್ ಜೆಡಿಎಸ್ ಗೆ ಫೈಟ್ ಕೊಡಲು ಬಿಜೆಪಿ ಸಹ ಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ರಥದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರೋ 4 ವಿಶೇಷ ಬಸ್ ಗಳಲ್ಲಿ ಬಿಜೆಪಿ ನಾಯಕರು ಮತಯಾಚನೆ ಮಾಡಲಿದ್ದು, ಇಂದು ಬಿಜೆಪಿ ಕಚೇರಿಯಲ್ಲಿ  ರಥದ ಮಾದರಿಯಲ್ಲಿ ನಿರ್ಮಾಣವಾದ ಬಸ್ ಗಳಿಗೆ ಬಿಜೆಪಿ ನಾಯಕರು ಪೂಜೆ ಮಾಡುವ ಮೂಲಕ ಚಾಲನೆಯನ್ನು ನೀಡಿದ್ರು.ಮೊದಲ ರಥಯಾತ್ರೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಕೇಸರಿ ಪಡೆ ನಿರ್ಧರಿಸಿದ್ದು,”ವಿಜಯ ಸಂಕಲ್ಪ ಯಾತ್ರೆ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸರಕಾರದ ಸಾಧನೆ ಹಾಗೂ ನೀಡಿದ ಸವಲತ್ತುಗಳನ್ನು ಜನರಿಗೆ ತಿಳಿಸುವ ಗುರಿಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ