ಪಠ್ಯಪುಸ್ತಕ ಹೊರೆ ಇಳಿಕೆ ಸಂಬಂಧ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದೆ.
ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮಾತನಾಡಿದ್ದು, ಈಗಲಾದರೂ ಶಾಲಾ ಮಕ್ಕಳಿಗೆ ಹೊರೆಯಾಗಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಹಿಂದೆ ನಮ್ಮ ಹೆಚ್.ಆರ್.ಡಿ.ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಶಾಲಾ ಮಕ್ಕಳ ಹೊರೆ ಅರ್ಧದಷ್ಟು ಕಡಿಮೆ ಮಾಡುವುದಾಗಿ ಹೇಳಿದ್ದರು.
ಪಠ್ಯದ ಹೊರೆ ಕಡಿಮೆ ಮಾಡಬೇಕು. ಆದರೆ ಅದಕ್ಕೆ ಸಾಕಷ್ಟು ಪೂರ್ವ ತಯಾರಿ ಬೇಕು. ಮಕ್ಕಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಜಿಲ್ಲಾ ರ್ಯಾಂಕ್ ಪದ್ಧತಿ ಕೈ ಬಿಡುವ ಚಿಂತನೆ ನಡೆಸಿತ್ತು. ಈಗ ಅದೇ ಜಿಲ್ಲಾ ರ್ಯಾಂಕ್ ಪದ್ಧತಿ ರಾಜಕೀಯಕ್ಕೆ ಬಳಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಶೈಕ್ಷಣಿಕ ಸಾಧನೆಗೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರಣ. ಈಗಲಾದರೂ ಸರ್ಕಾರ ಜಿಲ್ಲಾ ರಾಂಕಿಂಗ್ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಆಗ್ರಹ ಮಾಡಿದ್ರು. ಪುಸ್ತಕ ಭಾರ ಕಡಿಮೆಮಾಡಲು ಹೋಗಿ ಶಿಕ್ಷಣದ ಮೌಲ್ಯ ಕುಂದಬಾರದು ಎಂದೂ ಶಹಪೂರ್ ಹೇಳಿದ್ದಾರೆ.