ಬಿಜೆಪಿಯ ಮಂಗಳೂರು ಚಲೋ ಸಂಪೂರ್ಣ ವಿಫಲ: ಸಿಎಂ

ಗುರುವಾರ, 7 ಸೆಪ್ಟಂಬರ್ 2017 (15:03 IST)
ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ ಮಂಗಳೂರು ಚಲೋ ಕಾರ್ಯಕ್ರಮ ವಿಫಲವಾಗಿದೆ. ಬಿಜೆಪಿಯವರಿಗೆ ಜನ ಬೆಂಬಲ ದೊರೆತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸಭೆ ಅಂದ ಮೇಲೆ ತಳ್ಳಾಟ, ನೂಕಾಟ ಇದ್ದೇ ಇರುತ್ತದೆ,  ಕೇವಲ 3 ಸಾವಿರ ಕಾರ್ಯಕರ್ತರು ಮಾತ್ರ ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.
 
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆಯ ವೇಳೆ ಕೆಲವೆಡೆ ಕಲ್ಲು ತೂರಾಟ ನಡೆಸಿದ್ದಾರೆ. ಬಿಜೆಪಿಯ ಬೈಕ್ ರ್ಯಾಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಆದರೆ, ಸಿಎಂ ಸಿದ್ದರಾಮಯ್ಯ ಸರಕಾರದ ಸರ್ಕಸ್‌ ನಡುವೆಯೂ ಮಂಗಳೂರು ಚಲೋ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ