ಬಿಜೆಪಿ ಅವರದ್ದು ಭಾವನೆ ಮೇಲೆ ರಾಜಕಾರಣ -ಡಿಕೆಶಿ

ಸೋಮವಾರ, 9 ಜನವರಿ 2023 (20:23 IST)
ಕಾಂಗ್ರೆಸ್ ಪಕ್ಷದ್ದು ಬದುಕಿನ ಬಗ್ಗೆ ರಾಜಕಾರಣ  ಆದ್ರೆ ಬಿಜೆಪಿ ಅವರದ್ದು ಭಾವನೆ ಮೇಲೆ ರಾಜಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಗುಡಿಗಿದ್ದಾರೆ. ಸಿದ್ದರಾಮಯ್ಯ ನಿಜ ಕನಸುಗಳ ಪುಸ್ತಕ ಬಿಡುಗಡೆ ವಿಚಾರವಾಗಿ ಮಾತನಾಡಿ ನಾನು 300ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ದೇನೆ ಅದರ ಬಗ್ಗೆ ಮಾತನಾಡ್ಲಿಲ್ಲ,  ಚರ್ಚ್ ಕಟ್ಟಿಸಿದ್ದಕೆ ಮಾತನಾಡಿದ್ರು. ಬಿಜೆಪಿಯವರು ಬದುಕಿನ ಬಗ್ಗೆ ಹೇಳಕಾಗಲಿಲ್ಲ, ಅವರ ಅಭಿವೃದ್ಧಿ ಬಗ್ಗೆ ಹೇಳಲಾಗದೆ ಜನರ ಭಾವನೆ ಕೆಡಿಸುವ ಕೆಲಸ ಮಾಡ್ತಿದ್ದಾರೆ.ನಮ್ಮ ನಾಯಕರಿಗೆ ಕಳಂಕ ತರೋ ಕೆಲಸ ಮಾಡ್ತಿದ್ದಾರೆ, ಇದ್ಯಾವು ಕೆಲಸಕ್ಕೆ ಬರಲ್ಲ. ಟಿಪ್ಪು ಇತಿಹಾಸ ನಾವು ಬರೆದಿದ್ವಾ, ಟಿಪ್ಪು ಪುಸ್ತಕ ಬರೆದು ಬಿಡುಗಡೆ ಮಾಡಿ ಸಂತೋಷ ಪಟ್ಕೊಳ್ಳಲಿ ಬಿಡಿ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ