ಶಾಲೆ ಆರಂಭಕ್ಕೆ ಬಿಜೆಪಿಯಲ್ಲೇ ಅಪಸ್ವರ : ಬೇಡವೇ ಬೇಡ ಎಂದ ಸಂಸದೆ
ಇವತ್ತು ಮೊದಲು ಜೀವ ಉಳಿಸೋಣ, ಆ ಮೇಲೆ ಜೀವನ ಮಾಡೋಣ ಎಂದು ಬಿಜೆಪಿ ಸಂಸದೆಯೊಬ್ಬರು ಹೇಳಿದ್ದಾರೆ.
ಆನ್ ಲೈನ್ ಕ್ಲಾಸ್ ಮುಂದುವರೆಸುವಂತೆಯೂ ಮನವಿ ಮಾಡಿರುವ ಅವರು, ಯಾವುದೇ ಕಾರಣಕ್ಕೆ ಶಾಲೆ ಆರಂಭ ಬೇಡ ಎಂದಿದ್ದಾರೆ.
ರಾಜ್ಯ ಸೇರಿ ದೇಶಾದ್ಯಂತ ಶಿಕ್ಷಕರ ಸಾವು ಸಂಭವಿಸಿವೆ. ಶಿಕ್ಷಕರು ದೇಶದ ಆಸ್ತಿ, ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನ ಖಾಯಿಲೆ ಅಥವಾ ಸಮಸ್ಯೆಗೆ ದೂಡುವ ಮಾನಸಿಕತೆಯಲ್ಲಿಲ್ಲ. ಶಿಕ್ಷಕರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕು ಎಂದಿದ್ದಾರೆ.