ಸಿಎಂ ಬಿಎಸ್ ವೈ ದಣಿವರಿಯದ ನಾಯಕ- ಸಿಎಂ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಶೋಭಾ ಕರಂದ್ಲಾಜೆ

ಗುರುವಾರ, 27 ಫೆಬ್ರವರಿ 2020 (11:14 IST)
ಬೆಂಗಳೂರು : ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನಲೆ ಸಂಸದೆ ಶೋಭಾ ಕರಂದ್ಲಾಜೆ ಸಿಎಂಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದಣಿವರಿಯದ ನಾಯಕ. ಮುಂದಿನ ಹುಟ್ಟುಹಬ್ಬಕ್ಕೆ ಬಿಎಸ್ ವೈ ಸಿಎಂ ಆಗಿರಲೆಂದು ಕಳೆದ ಬಾರಿ ಹುಟ್ಟುಹಬ್ಬದಂದು ನಾವು ಸಂಕಲ್ಪ ಮಾಡಿದ್ದೆವು. ಈ ಹುಟ್ಟುಹಬ್ಬದ ದಿನ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಮುಂದಿನ ಹುಟ್ಟುಹಬ್ಬಕ್ಕೂ ಯಡಿಯೂರಪ್ಪ ಸಿಎಂ ಆಗಿರಲಿ. ಅವರ ಮೇಲೆ ಸದಾ ದೇವರ ಆಶೀರ್ವಾದ ಇರಲಿ ಎಂದು ಸಿಎಂ ಹುಟ್ಟುಹಬ್ಬಕ್ಕೆ ಶೋಭಾ ಕರಂದ್ಲಾಜೆ ಶುಭಾಶಯ ಕೋರಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ