ಏಪ್ರಿಲ್ 10 ರೊಳಗೆ ಬಿಜೆಪಿ ಮೊದಲ ಪಟ್ಟಿ ರಿಲೀಸ್ : ಸಚಿವ ಅಶ್ವಥ್ ನಾರಾಯಣ
ಹಾಲಿ ಶಾಸಕರು ಮತ್ತು 224 ಶಾಸಕರುಗಳಿಗೆ ಕನಿಷ್ಠ ಮೂರು ಹೆಸರು ಪಟ್ಟಿ ಮಾಡಲಾಗಿದೆ.ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ..ಹತ್ತರೊಳಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಆಗಲಿದ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ರು.... ಮೊದಲು ಒಂದು ಹಂತದ ಪಟ್ಟಿ ಬಿಡುಗಡೆ ಆಗಲಿದೆ.ಉಳಿದ ಒಂದು ಪಟ್ಟಿ ನಂತರ ಬಿಡುಗಡೆ ಆಗಲಿದೆ.ಆಯ್ಕೆ ಪಟ್ಟಿ ವ್ಯವಸ್ಥಿತವಾಗಿ ನಡೆಯುತ್ತಿದೆ...ಕ್ಷೇತ್ರವಾರು ಯಾವುದೇ ಶಾಸಕರ ಹೆಸರು ಬದಲಾವಣೆ ಇಲ್ಲ.ಶಾಸಕರ ಯಾವುದೇ ಬದಲಿ ಕ್ಷೇತ್ರ ಸ್ಪರ್ಧೆ ಚರ್ಚೆಯಾಗಿಲ್ಲ.ಒಂದು ಕ್ಷೇತ್ರಕ್ಕೆ ಮೂವರ ಹೆಸರು ಮಾತ್ರ ಕಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ರು.