ನಾಳೆ ಮೋದಿ ಮಣಿಪುರಕ್ಕೆ: ರಾಹುಲ್ ಗಾಂಧಿ ಅಚ್ಚರಿ ಹೇಳಿಕೆ

Sampriya

ಶುಕ್ರವಾರ, 12 ಸೆಪ್ಟಂಬರ್ 2025 (15:39 IST)
ಜುನಾಗಢ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಮಣಿಪುರ ಭೇಟಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಸ್ವಾಗತಿಸಿದ್ದಾರೆ.

ಗುಜರಾತ್‌ನ ಜುನಾಗಢಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ಮಣಿಪುರದಲ್ಲಿ ಬಹಳ ಹಿಂದಿನಿಂದಲೂ ಪಕ್ಷುಬ್ಧ ವಾತಾವರಣ ಇದೆ. ಪ್ರಧಾನಿ ಈಗ ಹೋಗುತ್ತಿದ್ದಾರೆ ಎಂದು. 

ಮತಗಳ್ಳತನದ ಬಗ್ಗೆ ಮತ್ತೇ ಪುನರುಚ್ಚರಿಸಿದ ಗಾಂಧಿ ಅವರು  ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆದೇಶಗಳನ್ನು "ಕದ್ದಿದ್ದಾರೆ" ಎಂದು ಮತ್ತೊಮ್ಮೆ ಆರೋಪಿಸಿದರು.

ಕುಕಿ ಮತ್ತು ಮೈಟೈ ಸಮುದಾಯಗಳ ನಡುವಿನ ಜನಾಂಗೀಯ ಕಲಹದ ನಂತರ ರಾಜ್ಯಕ್ಕೆ ಭೇಟಿ ನೀಡದ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ನಡುವೆಯೇ ಪ್ರಧಾನಿ ಮೋದಿ ನಾಳೆ ಭೇಟಿ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ