ಗುಜರಾತ್‌ನಲ್ಲಿ ಸುಳ್ಳು ಹೇಳಿ ಬಿಜೆಪಿ ಗೆದ್ದಿದೆ: ಖರ್ಗೆ

ಶನಿವಾರ, 23 ಡಿಸೆಂಬರ್ 2017 (15:22 IST)
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯ ಗೆಲುವಿಗೆ ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಕಡಿಮೆ ಅಂತರದಲ್ಲಿಯೇ ಸೋತಿದ್ದೇವೆ.ಅದು ಕಾಂಗ್ರೆಸ್ ಪಕ್ಷದ ಸೋಲಲ್ಲ, ಬಿಜೆಪಿಯ ಗೆಲುವೂ ಅಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ವಿಶ್ಲೇಷಿಸಿದ್ದಾರೆ.
.ಮುಂದಿನ ಚುನಾವಣೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ.ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದೇವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮುಂಬರುವ ಚುನಾವಣೆಗಳನ್ನುಒಗ್ಗಟ್ಟಾಗಿ ಎದುರಿಸುತ್ತೇವೆ.ಪ್ರಧಾನಿ ಮೋದಿ ಅವರ ಅಪಪ್ರಚಾರದಿಂದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸೋಲು ಕಾಣುವಂತಾಯಿತು‌. ಸುಳ್ಳುಗಳನ್ನೇ ಆಡಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಆರೋಪಿಸಿದರು. 
 
ಪಾಕಿಸ್ತಾನ ದೊಂದಿಗೆ ಸೇರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಿತೂರಿ ಮಾಡಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಚುನಾವಣೆ ಗೆದ್ದರು.‌ ಆದರೆ ಅದಕ್ಕೆ ಸಂಸತ್ ನಲ್ಲಿ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಬಿಜೆಪಿ ಪ್ರಭಾವ ಬೀಳೋದಿಲ್ಲ. ಗುಜರಾತ್ ನಲ್ಲೇ ಕಾಂಗ್ರೆಸ್ ಮುಕ್ತ ಮಾಡಲಾಗಿಲ್ಲ. ಇನ್ನು ಕರ್ನಾಟಕದಲ್ಲೇನು ಮಾಡತಾರೆ ಅಂತ  
ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ರು. 
 
ಇವಿಎಂ ಯಂತ್ರಗಳ ಬಗ್ಗೆ ಜನರಿಂದ ಅಪಸ್ವರ ಎದ್ದಿದೆ.
 
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳ ನಂತರ ಅದರ ಬಗ್ಗೆ ಅನುಮಾನಗಳಿವೆ. 
ಜನರ ಅನುಮಾನಗಳು ಬಗೆಹರಿಯಬೇಕೆಂದರೆ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ. 
ತಂತ್ರಜ್ಞಾನದಲ್ಲಿ ಅತ್ಯಂತ ಮುಂದಿರುವ ಅಮೆರಿಕ ಮತ್ತಿತರ ದೇಶಗಳು ಇವಿಎಂ ಕೈಬಿಟ್ಟು ಬ್ಯಾಲೆಟ್ ಪೇಪರ್ ಗೆ ಮೊರೆ ಹೋಗಿವೆ. 
 
ಹೀಗಾಗಿ ಭಾರತದಲ್ಲಿಯೂ ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ