ವಿಜಯೇಂದ್ರ ಆಯ್ಕೆ ಒಮ್ಮತದ ಆಯ್ಕೆ .ವಿಜಯೇಂದ್ರ ಅವರಿಗೆ ಕಿರಿಯರು ಹಿರಿಯರು ವ್ಯತ್ಯಾಸ ಇಲ್ಲ.ಎಲ್ಲರನ್ನ ಗೌರವಿಸಿ ಜೊತೆಯಲ್ಲಿ ತೆಗೆದುಕೊಂಡ ಹೋಗುವ ದೊಡ್ಡ ಗುಣ ಇದೆ.ತಳಹಂತದಿಂದ ಪಕ್ಷದಲ್ಲಿ ತೊಡಗಿಸಿಕೊಂಡು ಬೆಳೆದಿದ್ದಾರೆ.ಸಂಘಟನೆಯಲ್ಲಿ ಅನುಭವವಿದೆ.ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.ಚುನಾವಣೆ ತಂತ್ರಗಾರಿಕೆಯನ್ನು ಹೇಗೆ ಗೆಲ್ಲಬೇಕು, ಫಲಿತಾಂಶದ ಹೇಗೆ ಕೊಡಬೇಕೆಂಬ ಬುದ್ದಿವಂತಿಕೆ ಇದೆ.ಇದರಿಂದ ಪಕ್ಷಕ್ಕೆ ಒಳ್ಳೆದಾಗುತ್ತೆ.ಎಲ್ಲರನ್ನ ಮುಂದೆ ತೆಗೆದುಕೊಂಡು ಸವಾಲು ಅವರಿಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಹಿರಿಯ ನಾಯಕರ ಅಸಮಧಾನ ವಿಚಾರವಾಗಿ ಅಸಮದಾನ ಇಲ್ಲ.ಯಾರಾದ್ರು ಪ್ರಯತ್ನ ಮಾಡಿದ್ರೆ , ಅವರೆಲ್ಲಾ ಮಾಡಿದ್ದಾರೆ ಅನಿಸೊಲ್ಲ.ನಮ್ಮಲ್ಲಿ ಸೆಲೆಕ್ಷನ್ ಕಷ್ಟ, ಲಾಭಿ ನಡೆಯೊಲ್ಲ. ಮೆರಿಟ್ ಮಾತ್ರ ನಡೆಯುತ್ತೆ.ಹೈಕಮಾಂಡ್ ಮೆರಿಟ್ ವಿಚಾರದ ಮೇಲೆ ಆಯ್ಕೆ ಮಾಡಿದ್ದಾರೆ.ಯಾರು ಮನಸ್ತಾಪ ಬೇಜಾರಿನಲ್ಲಿದ್ದಾರೆ ಅನಿಸೊಲ್ಲ.ಇದು ಎಲ್ಲರ ಒಮ್ಮತದ ಆಯ್ಕೆ.ಸಂಘಟನೆ ಬಲಪಡಿಸುವಂತಹ ಕೆಲಸ ಆಗಬೇಕಿದೆ.
ಕಾಂಗ್ರೆಸ್ ನವರ ಬಾಯಲ್ಲಿ ಈ ಮಾತು ಬರಬಾರದಾಗಿತ್ತು.ಯಾಕೆಂದ್ರೆ ಗುಲುಮಗಿರಿ ಮಾಡುವಂತಹ ಈ ಕಾಂಗ್ರೆಸ್ .ಆ ಕುಟುಂಬದ ಚಪ್ಪಲಿ ಹೊತ್ತು ಇದುವರೆಗು ಅವರ ಕಾಲು ಸವೆದಿದೆ.ಈಗಿರುವ ಬಿಜೆಪಿ ಮೇಲೆ ಆಪಾದನೆ ಮಾಡೋದಕ್ಕೆ ನಾಚಿಕೆ ಆಗಬೇಕು.ಉತ್ತಮ ಕಾರ್ಯಕರ್ತನನ್ನ ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ.ಕಾಂಗ್ರೆಸ್ ನಾಯಕರದ್ದು ನಕಲಿ ಗಾಂಧಿ ಕುಟುಂಬ.ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಉತ್ತರ ಕಲಿಸುವ ಕಾಲ ಬರುತ್ತೆ ಕಾಂಗ್ರೆಸ್ ನವರಿಗೆ ಬಿಜೆಪಿ ಕಾರ್ಯಕರ್ತರು ಉತ್ತರ ಕೊಡ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.