ಆಪರೇಷನ್ ಕಮಲನಾ.....? ಆಪರೇಷನ್ ಹಸ್ತನಾ...? ಗೆಲ್ಲೊರ‍್ಯಾರು..?

ಭಾನುವಾರ, 12 ನವೆಂಬರ್ 2023 (19:58 IST)
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ೧೩೫ ಸ್ಥಾನಗಳನ್ನು ಗೆದಿದ್ದೇ, ಐದು ವರ್ಷ ಯಾರೇ ತುಟಿಕ್, ಪಿಟಿಕ್ ಅಂದರೂ ಸರ್ಕಾರ ಅಲ್ಲಾಡೋದು ಸಾಧ್ಯನಾ, ಅನ್ನುವ ಕೊಂಬು ಡೆಲ್ಲಿಯ ಕಾಂಗ್ರೆಸ್ ಹೈಕಮಾಂಡ್‌ನಿAದ ಹಿಡಿದು, ರಾಜ್ಯದ ಕಾಂಗ್ರೆಸ್ ನಾಯಕರಿಗೆ ಬಂದು ಬಿಟ್ಟಿತ್ತು..
 
ನೋಡಿ ಸ್ವಾಮಿ ನಾವೀರೋದು ೧೩೫ ಮಂದಿ, ಅಷ್ಟು ಸುಲಭವಾಗಿ ಸರ್ಕಾರವನ್ನು ಬೀಳಿಸ್ತೀವಿ ಅನ್ನೋರ ಮಾತಿಗೆ ಡೋಂಟ್ ಕೇರ್ ಅನ್ನುವ ಫೀಲ್‌ನಲ್ಲಿದ್ದ ಕಾಂಗ್ರೆಸ್‌ಗೆ ಇದೀಗ ಒಂಥರಾÀ ಹೊಸ ಆತಂಕ ಶುರುವಾಗಿದೆ. ಆಪರೇಷನ್ ಕಮಲದ ಹಿಂಟ್ ಪದೇ ಪದೇ ಸಿಕ್ತಾ ಇದೆ. ಹೀಗಿದ್ದರೂ ಕೂಡ, ಕಾಂಗ್ರೆಸ್ ಕೂಡ ಲೋಕಸಭಾ ಚುನಾವಣೆಯಲ್ಲಿ ಅಂದುಕೊAಡ ಟಾರ್ಗೆಟ್೨೦ ರೀಚ್ ಮಾಡೋದಕ್ಕೆ, ಡಿಕೆಶಿಯ ನೇತೃತ್ವದಲ್ಲೇ ಆಪರೇಷನ್ ಹಸ್ತಕ್ಕೆ ಕೈ ಹಾಕಿದೆ ಅನ್ನೋದು ಪಕ್ಕಾ ಆಗಿ ಬಿಟ್ಟಿದೆ..

ಯೆಸ್... ಡಿಕೆಶಿನೇ ನೇರವಾಗಿ ಪಕ್ಕಾ ಪ್ಲಾನ್‌ಮಾಡಿಕೊಂಡು, ಅಖಾಡ ಸಿದ್ಧ ಮಾಡಿದ್ದಾರೆ. ಬಿಜೆಪಿಯ ಮತ್ತು ಜೆಡಿಎಸ್‌ನ ಒಂದಷ್ಟು ಹಾಲಿ, ಮತ್ತು ಮಾಜಿ ಶಾಸಕರಿಗೆ ಗಾಳ ಹಾಕಿದ್ದಾರೆ ಅನ್ನುವ ಮಾತುಗಳು ಜೋರಾಗಿಯೇ ಕೇಳಿ ಬರ್ತಾ ಇದಾವೆ.... 

ಅಲ್ಲಿಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಆಪರೇಷನ್ ರಾಜಕಾರಣದ ಆಟ ಒಂದು ಕಡೆಯಾದ್ರೆ, ಇನ್ನೊಂದು ಕಡೆ ಬರೀ ೧೯ ಸೀಟ್ ಗೆದ್ದಿರುವ ದಳಪತಿಗಳ ಕೋಟೆಯಲ್ಲಿ ಆಪರೇಷನ್ ಆಟ ಸದ್ದು ಮಾಡುತ್ತೆ, ಅನ್ನೋದು ನಂಬೋದಕ್ಕೆ ಕಷ್ಟವಾದರೂ, ಬಿಜೆಪಿಯ ಸಖ್ಯವನ್ನು ಲೋಕಸಭಾ ಎಲೆಕ್ಷನ್ ದೃಷ್ಟಿಯಿಂದ ಬೆಳೆಸಿರೋದು, ಈ ಕಡೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಖೆಡ್ಡಾ ತೊಡಲ್ಲ ಅನ್ನೋದು ಯಾವ ಗ್ಯಾರಂಟಿ ಹೇಳಿ...?
 
ಹಾಗೋ ಹೀಗೋ ಇದ್ವೀ ನಾವು ಅನ್ನುವವರ ಆಟ, ಲೋಕಸಭಾ ಚುನಾವಣೆಯೂ ಮುಗಿಯೋ ಹೊತ್ತಿಗೆ, ಏನೇನು ಆಗಿರೋತ್ತೊ ಅನ್ನೋದೆ ದೊಡ್ಡ ಕುತೂಹಲ. ಯಾಕಂದ್ರೆ ಹಾಗೇ ನೋಡಿದರೆ ಮೂರು ಪಕ್ಷಗಳಿಂದಲೂ, ಆಪರೇಷನ್ ಗೇಮ್ ಪ್ಲಾö್ಯನ್‌ಗಳು ಸದ್ದಿಲ್ಲದೇ ನಡೆದು ಹೋಗ್ತಾ ಇವೆ ಅನ್ನೋದು ಆಯಾ ಪಕ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದಲೇ ಗೊತ್ತಾಗುತ್ತಿದೆ....
 
ಯೆಸ್.... ಒಂದು ಕಡೆ ಟ್ರಬಲ್‌ಶೂಟರ್ ಡಿಕೆಶಿಯವರೇ, ಆಪರೇಷನ್ ಬಾಂಬ್‌ನ್ನು ನೇರವಾಗಿಯೇ ಸಿಡಿಸಿ ಬಿಟ್ಟರಾ ಅನ್ನೋ ಗೊಂದಲ ಶುರುವಾಗುತ್ತೆ, ನವಂಬರ್ ೧೫ಕ್ಕೆ ಯಾರು, ಯಾವ ಕಡೆ ಬರ್ತಾರೆ ನೋಡಿ, ಅನ್ನೋದನ್ನ ದಳಪತಿಗಳಿಗೆ ಶಾಕ್ ಕೊಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದಂತಿದೆ. ಜೆಡಿಎಸ್ ಮತ್ತು ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್‌ಗೆ ಬರ್ತಾರೇ, ಜಸ್ಟ್ ವೇಯ್ಟ್ ಅಂಡ್ ಸೀ ಅನ್ನೊ ಡಿಕೆಶಿಯ ದಾಟಿ, ಆಪರೇಷನ್ ಹಸ್ತಕ್ಕೆ ಇನ್ನಷ್ಟು ಪವರ್‌ಕೊಟ್ಟಿದೆ..!??

ಜೆಡಿಎಸ್ ಶಾಸಕರಿಗೆ ಗಾಳ ಹಾಕೋದು ಪಕ್ಕಾ ಅನ್ನೋ ಮಾತಿದೆ. ಕಾಂಗ್ರೆಸ್‌ನ ಪವರ್‌ಫುಲ್ ಲೀಡರ್ ಡಿಕೆಶಿಯೇ, ದಳಪತಿಗಳ ಕೋಟೆಯನ್ನು ಛಿದ್ರ ಮಾಡಲು ಎಲ್ಲಾ ದಿಕ್ಕುಗಳಿಂದಲೂ, ಮಾಸ್ಟರ್‌ಪ್ಲಾನ್ ಮಾಡ್ತಾ ಇದ್ದಾರೆ. ಅದರಲ್ಲೂ ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಹವಾವನ್ನು, ಮತ್ತಷ್ಟು ಕುಗ್ಗಿಸಿ, ಹೈಕಮಾಂಡ್ ಮುಂದೇ ಲೋಕಸಭಾ ಚುನಾವಣೆಯಲ್ಲಿ ಏನಿಲ್ಲ ಅಂದ್ರು, ೨೦ ಸೀಟ್ ಗೆದ್ದು ನಾನೇ ಪವರ್‌ಫುಲ್ ಡಿಕೆ ಅಂತ ಬಿಂಬಿಸೋದು ಕನಕಪುರ ಸುಲ್ತಾನನಾ ಅಸಲಿ ರಾಜಕೀಯ ಲೆಕ್ಕಾಚಾರ..?
 
ಕಾಂಗ್ರೆಸ್ ಲೋಕಸಭೆಯ ಚುನಾವಣೆಯಲ್ಲಿ ೨೦ ಫ್ಲಸ್ ಗೆದ್ದು ಬಿಟ್ಟರೇ, ಹೈಕಮಾಂಡ್ ಲೆವೆಲ್‌ನಲ್ಲಿ ಡಿಕೆಶಿಯ ಖದರ್ ಇನ್ನಷ್ಟು ಹೆಚ್ಚಾಗುತ್ತೆ, ನಂತರ ಪವರ್‌ಶೇರಿಂಗ್ ಸಿಎಂ ಕನಸಿಗೆ ಮತ್ತಷ್ಟು ಜೀವ ಬಂದAತೆ ಆಗಲಿದೆ. ಅಲ್ಲಿಗೆ ಡಿಕೆನೇ ರಾಜ್ಯ ಕಾಂಗ್ರೆಸ್‌ಗೆ ಬಾಸ್ ಆಗಬಹುದು... ಬಹುಶಃ ಈ ಎಲ್ಲಾ ಲೆಕ್ಕಾಚಾರಗಳನ್ನು ಇಟ್ಟುಕೊಂಡೇ, ಡಿಕೆಶಿಯೂ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ ಎನ್ನಲಾಗ್ತಿದೆ..?
 
ಇನ್ನೂ ಆ ಕಡೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಪರೇಷನ್ ಕಮಲದ ಟೈಂ ಬಾಂಬ್, ಇನ್‌ಟೈಂಗೆ ಸಿಡಿಯೋ ಯಾವುದೇ ಲೆಕ್ಕಾಚಾರ ಕಾಣಿಸುತ್ತಿಲ್ಲ. ಯಾಕಂದರೇ, ಆಪರೇಷನ್ ಕಮಲ ಮಾಡೋದಿರಲೀ, ಮೊದಲು, ವಿಪಕ್ಷ ನಾಯಕ, ಇದರ ಜೊತೆಗೆ ನೆಟ್ಟಿಗೆ ಒಬ್ಬ ಅಧ್ಯಕ್ಷ ಅಂತ ನೇಮಕ ಮಾಡಿಕೊಳ್ಳಲೀ. ಆ ಮ್ಯಾಲೇ ರಾಜ್ಯದಲ್ಲಿ ಕಾಂಗ್ರೆಸ್ ಬೀಳಿಸೋದರ ಕಡೆಗೆ ಗಮನ ಹರಿಸಲಿ ಅನ್ನೋದು ಬಿಜೆಪಿಯಲ್ಲೇ ಒಂದಷ್ಟು ಮಂದಿಯ ಸೈಲೆಂಟ್ ಟಾಕ್ ಆಗಿದೆ..?
 
ಜೆಡಿಎಸ್‌ಗೆ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲೇಬೇಕೆಂಬ ಹಠ ಬಂದಿರೋದು ಅದೊಂದೆ ಕಾರಣಕ್ಕೆ. ಅದು ಕನಕಪುರದ ಬಂಡೆಯ ವಿಚಾರಕ್ಕೆ. ಯಾಕಂದ್ರೆ ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಇದ್ದ, ಸಮುದಾಯದ ಮತ ಬಲವನ್ನು ಅಸೆಂಬ್ಲಿ ಚುನಾವಣೆಯಲ್ಲಿ, ಇದೇ ಡಿಕೆಶಿಯೇ ಕುಗ್ಗಿಸಿ ಕೊನೆಗೆ ಕಾಂಗ್ರೆಸ್‌ನ ಪ್ರಚಂಡ ಮುನ್ನಡೆಗೆ ಕಾರಣವಾಗಿದ್ದರು. ಹಾಗಾಗಿ ಹೀಗೆ ಬಿಟ್ಟರೆ, ಪಕ್ಷದ ಅಸ್ತಿತ್ವಕ್ಕೆ ಇದೇ ಡಿಕೆಶಿನೇ ಕಂಟಕವಾಗಬಹುದು. ಅದರಲ್ಲೂ ಒಕ್ಕಲಿಗರ ವೋಟ್‌ಬ್ಯಾಂಕ್ ಡಿಕೆಶಿಯ ಕಾರಣಕ್ಕೆ ಕಾಂಗ್ರೆಸ್‌ನ ಕಡೆ ವಾಲಬಹುದು ಅನ್ನೋದು ದಳಪತಿಗಳ ಆತಂಕಕ್ಕೆ ಕಾರಣ

ಹಾಗಾಗಿ ಹೇಗೋ ಬಿಜೆಪಿ ಅಪರೇಷನ್ ಕಮಲ ಅಂತ, ಅಖಾಡಕ್ಕೆ ಇಳಿದಂತೆ ಕಾಣ್ತಿದೆ, ಇದರ ಜೊತೆಗೆ ನಾವೂ ಕೂಡ ಒಂದಷ್ಟು ಸಪೋರ್ಟ್ ಕೊಟ್ಟು ಬಿಟ್ಟರೇ, ಕಾಂಗ್ರೆಸ್‌ನ ಸರ್ಕಾರವನ್ನು ಪತನಗೊಳಿಸಬಹುದಾ ಅನ್ನೋದು ಕುಮಾರಸ್ವಾಮಿಯ ಮೈಂಡ್‌ನಲ್ಲಿ ಓಡ್ತಿರಬಹುದಾ..?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ