ಬ್ಲ್ಯಾಕ್ ಫಂಗಸ್ ಎಂದರೇನು? ಇದರ ಲಕ್ಷಣಗಳೇನು?

ಶನಿವಾರ, 15 ಮೇ 2021 (08:42 IST)
ಬೆಂಗಳೂರು: ಕೊರೋನಾ ಅಲೆಯಲ್ಲಿ ಜನ ತತ್ತರಿಸುವಾಗಲೇ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ಖಾಯಿಲೆ ಜನರಲ್ಲಿ ಹೊಸ ಭೀತಿ ಹುಟ್ಟುಹಾಕಿದೆ.


ಕೊರೋನಾ ಬಳಿಕ (ಪೋಸ್ಟ್ ಕೋವಿಡ್) ಕಂಡುಬರುವ ಮಾರಣಾಂತಿಕ ಖಾಯಿಲೆ ಇದಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಇದರಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಇದೆ.

ಕೊರೋನಾದಿಂದ ಗುಣಮುಖರಾದ ಸಂದರ್ಭದಲ್ಲಿ ವಿಪರೀತ ತಲೆ ಸಿಡಿತ, ಕಣ್ಣುಗಳಲ್ಲಿ ಉರಿ, ನೋವು, ಕೆನ್ನೆಯ ಭಾಗಗಳಲ್ಲಿ ಬಾತುಕೊಳ್ಳುವುದು, ನೋವು ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆ ಕಂಡುಬಂದರೆ ಅದು ಬ್ಲ್ಯಾಕ್ ಫಂಗಸ್ ನ ಲಕ್ಷಣಗಳು ಎನ್ನಬಹುದು. ಇಂತಹ ಸಂದರ್ಭದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೊರೋನಾಗೂ ಇದಕ್ಕೂ ಇರುವ ಸಂಬಂಧವೇನು ಎಂಬುದು ತಿಳಿದುಬಂದಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಕೊರೋನಾಗೆ ನೀಡುವ ಚಿಕಿತ್ಸೆಯ ಪರಿಣಾಮವಾಗಿಯೂ ಇದು ಬರುತ್ತದೆ ಎನ್ನಲಾಗಿದೆ. ಆದರೆ ಇದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಆದರೆ ಇದು ಅಪಾಯಕಾರಿಯಾಗುವುದು ಖಚಿತ. ಕೆಲವರಿಗೆ ಪ್ರಾಣಕ್ಕೆ ಎರವಾದರೆ ಮತ್ತೆ ಕೆಲವರಿಗೆ ದೃಷ್ಟಿ ಸಮಸ್ಯೆ ಅಥವಾ ಸಂಪೂರ್ಣ ಅಂಧತ್ವ ಬರುವ ಸಾಧ‍್ಯತೆಯಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವುದು ಮುಖ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ