ಯುವತಿಗೆ ಬ್ಲ್ಯಾಕ್​ ಮೇಲ್​; ವ್ಯಕ್ತಿ ಬಂಧನ

ಭಾನುವಾರ, 8 ಜನವರಿ 2023 (17:19 IST)
ಮಹಿಳೆಗೆ ಬ್ಲ್ಯಾಕ್​​ಮೇಲ್ ಮಾಡಿ, ದುಡ್ಡು ಮಾಡ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಸಮರ್ ಪರಮಣಿಕ್ ಬಂಧಿತ ಆರೋಪಿ. ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡಿ ಡ್ಯಾನ್ಸ್ ಬಾರ್​​​ನಲ್ಲಿ ಕುಣಿಸಿ, ಈತ ದುಡ್ಡು ಮಾಡ್ತಿದ್ದನಂತೆ. ಬ್ಯೂಟಿ ಪಾರ್ಲರ್​ವೊಂದರಲ್ಲಿ ಕೆಲಸ ಮಾಡ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಗೆ ಈತ ಬ್ಲ್ಯಾಕ್​​​ಮೇಲ್ ಮಾಡಿದ್ದಾನೆ. ಪಾರ್ಲರ್​​​ಗೆ ಕಸ್ಟಮರ್ ಆಗಿ ಹೋಗಿ ಪರಿಚಯ ಮಾಡಿಕೊಂಡಿದ್ದ ಆರೋಪಿ, ನಂತರ ಯುವತಿಯನ್ನ ಮೀಟ್ ಮಾಡೋ ನೆಪದಲ್ಲಿ ಕರೆದು ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದನ್ನು ರೆಕಾರ್ಡ್​ ಮಾಡಿ ಯುವತಿಗೆ ಬ್ಲ್ಯಾಕ್​ ಮೇಲ್​​ ಮಾಡಿದ್ದನಂತೆ. ಬಾರ್​ನಲ್ಲಿ ಕುಣಿಯಬೇಕು ಇಲ್ಲದೇ ಹೋದರೆ ಈ ವಿಡಿಯೋವನ್ನು ವೈರಲ್​ ಮಾಡುವುದಾಗಿ ಬೆದರಿಸಿದ್ದಾನೆ. ಇದಕ್ಕೆ ಹುಡುಗಿ ಹೆದರಿ ಅವನ ತಾಳಕ್ಕೆ ಕುಣಿದಿದ್ದಾಳೆ. ಯುವತಿ ಮನೆಗೆ 20 ಸಾವಿರ ಕಳಿಸಿ ಈತ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದನಂತೆ. ಈ ಕುರಿತು ಯುವತಿ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹಲವು ಯುವತಿಯರಿಗೆ ಇದೇ ರೀತಿ‌ ಮಾಡಿರೋ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ