ಲವ್ ಮಾಡಿ ಮತಾಂತರಕ್ಕೆ ಒಪ್ಪಂದ ಮಾಡಿಕೊಂಡ ವ್ಯಕ್ತಿ ಬಂಧನ

ಶನಿವಾರ, 16 ಜುಲೈ 2022 (09:50 IST)
ಮುಂಬೈ: ಲವ್ ಮಾಡಿ ಮತಾಂತರಕ್ಕೆ ಒಪ್ಪಂದ ಮಾಡಿಕೊಂಡು ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ.

32 ವರ್ಷದ ಅರಾಫತ್ ಎಂಬಾತ ಬಂಧಿತ. ಈತ ಸ್ವಂತ ಶಾಪಿಂಗ್ ಕಾಂಪ್ಲೆಕ್ಸ್ ಹೊಂದಿದ್ದ. ಇಲ್ಲಿ ಅಂಗಡಿ ಹಾಕಿಕೊಂಡಿದ್ದ ಮಹಿಳೆಗೆ ಲವ್ ಪ್ರಪೋಸ್ ಮಾಡಿ ಮತಾಂತರವಾಗುವಂತೆ ಬಾಂಡ್ ಪೇಪರ್ ಮೇಲೆ ಒಪ್ಪಂದ ಮಾಡಿಕೊಂಡಿದ್ದ. ಬಳಿಕ ತನ್ನ ಫ್ಲ್ಯಾಟ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ.

ಆದರೆ ಇದೀಗ ಬೇರೊಬ್ಬ ಮಹಿಳೆ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದ. ಹೀಗಾಗಿ ಮಹಿಳೆ ದೂರು ನೀಡಿದ್ದಳು. ಇದೀಗ ಆರೋಪಿ ಕಂಬಿ ಎಣಿಸುತ್ತಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ