ಬಸ್ ಬಂದ್ ಬಿಸಿ: ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ಬುಧವಾರ, 7 ಏಪ್ರಿಲ್ 2021 (08:58 IST)
ಬೆಂಗಳೂರು: ಬಿಎಂಟಿಸಿ ಬಸ್ ಗಳ ಸಂಚಾರ ನಿನ್ನೆ ಮಧ್ಯಾಹ್ನದಿಂದಲೇ ಸ್ಥಗಿತೊಂಡಿದ್ದರಿಂದ ಜನ ಸಾಮಾನ್ಯರು ಪರದಾಡುವಂತಾಗಿತ್ತು.


ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು ಅನಿರ್ದಾಷ್ಟವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದರಿಂದಾಗಿ ಪರದಾಡುತ್ತಿರುವುದು ಜನ ಸಾಮಾನ್ಯರು.

ಬೆಂಗಳೂರಿನ ಪ್ರಮುಖ ಬಸ್ ಡಿಪೋಗಳಲ್ಲಿ ಸಾಲುಗಟ್ಟಿ ನಿಂತಿದ್ದ ಬಸ್ ಗಳು ನಿನ್ನೆಯಿಂದ ಸಂಚಾರ ಸ್ಥಗಿತಗೊಳಿಸಿದೆ. ಇದರಿಂದಾಗಿ ಬಸ್ ನಿಲ್ದಾಣಗಳಲ್ಲೇ ಪ್ರಯಾಣಿಕರು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲುವಂತಾಯಿತು. ಮೆಜೆಸ್ಟಿಕ್, ಯಶವಂತಪುರ, ನೆಲಮಂಗಲ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಇದೇ ಕತೆ. ಇಂದೂ ಕೂಡಾ ಇದು ಮುಂದುವರಿಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ