ದೇಶದ ಎಲ್ಲಾ ಸಾರಿಗೆ ನಿಗಮಗಳು ಇದೀಗ ಎಲೆಕ್ಟ್ರಿಕ್ ಬಸ್ ನತ್ತ ಒಲವು ತೋರುತ್ತಿವೆ. ಅದರಂತೆ ನಮ್ಮ BMTC ಸಂಸ್ಥೆಯು ಕೂಡ ಅತಿ ಹೆಚ್ಚು ಬಸ್ ಖರೀದಿ ಎತ್ತ ಮುಖ ಮಾಡಿದೆ..ಡೀಸೆಲ್ ಬಸ್ ಖರೀದಿಯಿಂದ ಕೈ ಸುಟ್ಟುಕೊಂಡಿರುವ ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ಗಳೂ ನಷ್ಟವನ್ನು ಕಡಿಮೆ ಮಾಡ್ತಿದೆ ಅಂತ ನಿಗಮದ ಅಧಿಕಾರಿಗಳೇ ಹೇಳ್ತಿದ್ದಾರೆ. ಈ ಹಿಂದೆ ಡೀಸೆಲ್ ಬಸ್ ಪ್ರತಿ ಕಿ.ಮೀ 65 ರೂ ಖರ್ಚಾಗ್ತಿತ್ತು. ಆದ್ರೆ ಎಲೆಕ್ಟ್ರಿಕ್ ಬಸ್ಗಳು ಪ್ರತಿ ಕಿ.ಮೀ ಗೆ 51 ರೂ ಖರ್ಚಾಗ್ತಿದೆ. ಹೀಗಾಗಿ ಎಲೆಕ್ಟ್ರಿಕ್ ಬಸ್ಗಳಿಂದ 14 ರೂಪಾಯಿ ಪ್ರತೀ ಕಿ ಮೀ ಗೆ ಹೊರೆ ತಪ್ಪಿಸ್ತಿದೆ. ಕೋವಿಡ್ನಿಂದ ತೀವ್ರ ಪಾತಾಳಕ್ಕೆ ಇಳಿದಿದ್ದ ಬಿಎಂಟಿಸಿಯನ್ನು ಎಲೆಕ್ಟ್ರಿಕ್ ಬಸ್ಗಳು ಕೈಹಿಡಿದು ಮೇಲೆತ್ತಿದೆ. ಹೀಗಾಗಿ ಹಂತಹಂತವಾಗಿ ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಳಿಸುವ ಮೂಲಕ ಬಿಎಂಟಿಸಿ ನಷ್ಟದ ಹೊರೆಯನ್ನು ತಪ್ಪಿಸುತ್ತಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಬಸ್ ಖರೀದಿಗೆ ಪ್ಲಾನ್ ಮಾಡಿದೆ.
ಇನ್ನೂ ಡೀಸೆಲ್ ಬಸ್ ಗಳಿಂದ ಕೋಟಿ ಕೋಟಿ ನಷ್ಟ ಕಾಣುತ್ತಿದ್ದ ಬಿಎಂಟಿಸಿ ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ಬಸ್ಗಳನ್ಬು ರಸ್ತೆಗಿಳಿಸ್ತಿದೆ. ಮೊದಲ ಹಂತದಲ್ಲಿ 90 ಹಾಗೂ ಎರಡನೇ ಬ್ಯಾಚ್ ನಲ್ಲಿ 300 ಬಸ್ಗಳನ್ನು ರಸ್ತೆಗಿಳಿಸಿದೆ. ಇದೀಗ ಮೂರನೇ ಬ್ಯಾಚಲ್ಲಿ 921 ಬಸ್ ಗಳು ರಸ್ತೆಗಿಳಿಸಲಿದೆ.ಮೊದಲ ಹಾಗೂ ಎರಡನೇ ಬ್ಯಾಚಲ್ಲಿ ಖರೀದಿಸಿರುವ ಬಸ್ಗಳು ಬಿಎಂಟಿಸಿ ನಷ್ಟದ ಭಾರವನ್ನು ತಗ್ಗಿಸಿದೆ. ಹೀಗಾಗಿ ಮೂರನೇ ಬ್ಯಾಚಲ್ಲು ಅತೀ ಹೆಚ್ಚು ಬಸ್ಗಳನ್ನು ಖರೀದಿಸಲು ಬಿಎಂಟಿಸಿ ಹೆಜ್ಜೆ ಇಟ್ಟಿದೆ.ಬಿಎಂಟಿಸಿ ತನ್ನ ಭಾರವನ್ನ ಇಳಿಸಿಕೊಳ್ಳಲು ಪರ್ಯಾಯ ಮಾರ್ಗವನ್ನು ಕಂಡುಹಿಡಿದುಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ ನಗರದಲ್ಲೇಡೆ ಎಲೆಕ್ಟ್ರಿಕ್ ಬಸ್ ಗಳು ಓಡಾಡಲುವೆ.