ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಬುಧವಾರ, 9 ಆಗಸ್ಟ್ 2023 (16:01 IST)
ಶಕ್ತಿ ಯೋಜನೆಯ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಮಾಡಿದೆ.ಮೊದಲ ಕಂತಿನಲ್ಲಿ 125 ಕೋಟಿ ರೂಪಾಯಿ ಸರ್ಕಾರ ಪಾವತಿ ಮಾಡಿದೆ.ಈಗ ಎರಡನೇ ಕಂತಿನಲ್ಲಿ ಒಟ್ಟು 70.51 ಕೋಟಿ ರೂಪಾಯಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.ಜೂನ್ 11ರಿಂದ 30 ರವರೆಗೆ ಶಕ್ತಿ ಯೋಜನೆಗೆ ಸಾರಿಗೆ ನಿಗಮಗಳಿಗೆ ವೆಚ್ಚ ಆದ ಮೊತ್ತವಾಗಿದ್ದು,ರಾಜ್ಯಪಾಲರ ಆದೇಶ ಅನುಸಾರ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎನ್ ಆದೇಶ ಮಾಡಿದ್ದಾರೆ.
 
ಯಾವ್ಯಾವ ನಿಗಮಕ್ಕೆ ಎಷ್ಟೆಷ್ಟು..? ( ಕೋಟಿ ರೂ. ) 
 
KSRTC - 26.49
 
BMTC - 12.27
 
NWKRTC - 18.30
 
KKRTC - 13.43

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ