ಆರಟಿಓಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೈಕ್ ಸವಾರಿಗೆ ಜಾಗೃತಿ ಮೂಡಿಸಬೇಕು.ನಗರದಲ್ಲಿನ ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸುವ ಸಲುವಾಗಿ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ.ಈಗಾಗಲೇ ಬಿಎಂಟಿಸಿ ಚಾಲಕರಿಗೆ ಪೊಲೀಸರಿಂದ ಹಾಗೂ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ .ಹಂತ ಹಂತವಾಗಿ ಬಿಎಂಟಿಸಿ ಎಲ್ಲಾ ಚಾಲಕರಿಗೂ ಕೂಡ ತರಬೇತಿ ನೀಡಲಾಗುತ್ತದೆ ಬಿಎಂಟಿಸಿ ಮುಖ್ಯ ಸಂಚಾರ ಮುಖ್ಯಸ್ಥರಾದ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಬಿಎಂಟಿಸಿ ಏಳು ವಲಯದಲ್ಲಿ ಪ್ರತಿ ಶನಿವಾರ 50 ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ .ಬಿಎಂಟಿಸಿಯಲ್ಲಿ 50 ಡಿಪೋಗಳಿದ್ದು, ಪ್ರತಿಯೊಂದು ಡಿಪೋದಿಂದ ಪ್ರತಿ ಶನಿವಾರ ಒಬ್ಬರಂತೆ ಒಟ್ಟು 50 ಜನರಿಗೆ ತರಬೇತಿ ನೀಡಲಾಗುತ್ತೆ.ಈಗಾಗಲೇ 1,400 ಚಾಲಕರಿಗೆ ತರಬೇತಿ ನೀಡಲಾಗಿದೆ .ನಿಂತಿರುವ ಬಸ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಸಾವಿಗೀಡಾಗುತ್ತಿದ್ದಾರೆ .ಇನ್ನು ಸಿಸಿಟಿವಿ ದೃಶ್ಯಗಗಳನ್ನ ಬಿಎಂಟಿಸಿ ಬಿಡುಗಡೆ ಮಾಡಿದೆ.