ಚಿಲ್ಲರೆ ಕಿರಿ ಕಿರಿಗೆ ಬ್ರೇಕ್ ಹಾಕಲು ಬಿಎಂಟಿಸಿ ಪ್ಲಾನ್..!

ಗುರುವಾರ, 24 ನವೆಂಬರ್ 2022 (20:58 IST)
ಬಸ್ ಕಂಡಕ್ಟರ್ ಹೇಳಿದಾಗ ಚಿಲ್ಲರೆ ಇಲ್ಲ ಸರ್ ಎಂದು ಪ್ರಯಾಣಿಕರು ಹೇಳುತ್ತಾರೆ. ಬೆಳಗ್ಗೆ ಬೆಳಗ್ಗೆ ನಾನು ಎಲ್ಲಿಂದ ಚಿಲ್ಲರೆ ಕೊಡಲಿ ಅಂತ ಕಂಡೆಕ್ಟರ್ ಹೇಳುತ್ತಾರೆ. ಹೀಗೆ ಆರಂಭವಾಗುವ ಚಿಲ್ಲರೆ ಗಲಾಟೆಗೆ ಬ್ರೇಕ್‌ ಹಾಕೋದಕ್ಕೆ ಬಿಎಂಟಿಸಿ , ಆನ್​ಲೈನ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.ಕೊರೋನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಂತರ ಅನೇಕ ಸಮಸ್ಯೆಗಳು ಕಂಡುಬಂದು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಜಾರಿ ಮಾಡಲು ಬಿಎಂಟಿಸಿ ಮುಂದಾಗಿದೆ. ಬಿಎಂಟಿಸಿ ಬಹುತೇಕ ಬಸ್‌ ನಿರ್ವಾಹಕರಿಗೆ ಆಯಂಡ್ರಾಯ್ಡ್‌ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ ನೀಡಲಾಗುತ್ತಿದ್ದು, ಇದಕ್ಕೆ ಏಕೀಕೃತ ಪಾವತಿ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಟಿಕೆಟ್​ಗಾಗಿ ಆನ್​ಲೈನ್ ಮೂಲಕ ಹಣ ಪಾವತಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ