ಬಸ್ ಆರಂಭವಾದರೂ ಪ್ರಯಾಣಿಕರ ಪರದಾಟ ತಪ್ಪಿಲ್ಲ

ಸೋಮವಾರ, 21 ಜೂನ್ 2021 (09:06 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾದ ಖುಷಿ ಒಂದೆಡೆಯಾದರೆ, ಪ್ರಯಾಣಿಕರಿಗೆ ಪರದಾಟ ಮಾತ್ರ ತಪ್ಪಿಲ್ಲ.


ಬಿಎಂಟಿಸಿ ಬಸ್ ಆರಂಭವಾದ ಮೊದಲ ದಿನವೇ ಪ್ರಯಾಣಿಕರ ನೂಕು ನುಗ್ಗಲು ಕಂಡುಬಂದಿದೆ. ಈ ನಡುವೆ ಸರ್ಕಾರದ ಆದೇಶದಂತೆ ಬಸ್ ಗಳಲ್ಲಿ ಕೇವಲ ಶೇ.50 ಪ್ರಯಾಣಿಕರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ. ಹೀಗಾಗಿ ಪ್ರಯಾಣಿಕರು ಬಸ್ ಗಾಗಿ ಕಾಯುವಂತಾಗಿದೆ.

ಸಾಕಷ್ಟು ಬಸ್ ಗಳಿಲ್ಲದ ಕಾರಣ ಪ್ರಯಾಣಿಕರು ಬಸ್ ಸಿಗದೇ ಪರದಾಡುವಂತಾಗಿದೆ. ಇನ್ನು ಬಸ್ ಸಂಖ್ಯೆಗಳೂ ಕಡಿಮೆಯಿರುವುದರಿಂದ ಪ್ರಯಾಣಿಕರು ಕೆಎಸ್ ಆರ್ ಟಿಸಿ,  ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬಸ್ ಆರಂಭವಾದರೂ ಪ್ರಯಾಣಿಕರ ಬವಣೆ ತಪ್ಪಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ