ಕಾರವಾರ : ಅರಬ್ಬೀ ಸಮುದ್ರದಲ್ಲಿ ಅಬ್ಬರದ ಗಾಳಿ ಹಾಗೂ ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿದ್ದು 12 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ನಡೆದಿದೆ.
ಮಂಗಳವಾರ ಅಂಕೋಲದ ಬೆಳ್ಳಂಬಾರಿನ ಕಡಲ ತೀರದಿಂದ ಅರಬ್ಬೀ ಸಮುದ್ರಕ್ಕೆ ಚಂದ್ರಾವತಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಸುಭಾಷ್ ಖಾರ್ವಿ ಎಂಬವರಿಗೆ ಸೇರಿದ ಪರ್ಶಿಯನ್ ಬೋಟ್ ಇದಾಗಿತ್ತು. ಹವಾಮಾನ ವೈಪರಿತ್ಯದಿಂದಾಗಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಹಾಗೂ ದೊಡ್ಡ ಅಲೆಗೆ ಬೋಟ್ನ ತಳಭಾಗದ ಫೈಬರ್ ಕಿತ್ತು ಹೋಗಿದ್ದು ಬಳಿಕ ಬೋಟ್ನ ಒಳಭಾಗಕ್ಕೆ ನೀರು ನುಗ್ಗಿ ಮುಳುಗಲು ಪ್ರಾರಂಭಿಸಿತು.
ತಕ್ಷಣ ಹತ್ತಿರದಲ್ಲಿದ್ದ ಇನ್ನೊಂದು ಬೋಟ್ನಲ್ಲಿದ್ದವರು ಮುಳುಗುತ್ತಿದ್ದ ಬೋಟ್ನಿಂದ 12 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಿಂದಾಗಿ ಅಂದಾಜು 1.50 ಕೋಟಿ ರೂ. ಹಾನಿಯಾಗಿದೆ.