ಬೊಮ್ಮಾಯಿ ಭರ್ಜರಿ ಗಿಫ್ಟ್

ಶುಕ್ರವಾರ, 4 ಮಾರ್ಚ್ 2022 (20:17 IST)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ಗೆ ರಾಜ್ಯದ ಸಚಿವರು ಶಹಬ್ಬಾಸ್ ಹೇಳಿದ್ದಾರೆ. ಕಾಮನ್‌ಮ್ಯಾನ್‌ ಮಂಡಿಸಿದ ಬಜೆಟ್‌ನಿಂದ ರಾಜ್ಯದ ಜನರ ಬದುಕು ಸುಗಮವಾಗಿದೆ ಎಂದು ಬಣ್ಣಿಸಿದ್ದಾರೆ. ರಾಜ್ಯದ ವಿವಿಧ ಸಚಿವರು ಬಜೆಟ್‌ಬಗ್ಗೆ ಎನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಮುಖ್ಯಮಂತ್ರಿಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಸೂಕ್ತ ನೀಲಿ ನಕಾಶೆಯನ್ನು ಹಾಕಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
 
'ಜನಸಾಮಾನ್ಯರ ಮೇಲೆ ಯಾವುದೆ ಹೊರೆ ಹಾಕದ ಜನಪರ ಮುಂಗಡ ಪತ್ರವನ್ನು ಮುಖ್ಯಮಂತ್ರಿಗಳು ಮಂಡಿಸಿರುವುದಕ್ಕೆ ಅವರನ್ನು ಅಭಿನಂದಿಸುವೆ. ಮನೆ ಮನೆಗೆ ಗಂಗೆ ಯೋಜನೆಗೆ ರಾಜ್ಯ ಸರ್ಕಾರದ ಪಾಲಾದ ₹ 7000 ಕೋಟಿ ಯನ್ನು ನೀಡಲು ಉದ್ದೇಶಿಸಿರುವುದನ್ನು ಸ್ವಾಗತಿಸುತ್ತೇನೆ. 2023-24ರೊಳಗೆ ಗ್ರಾಮೀಣ ಕರ್ನಾಟಕದ 25 ಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವ ಗುರಿಯನ್ನು ತಲುಪಲಾಗುವುದು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 1,600 ಕೋಟಿ ಮೀಸಲಿಟ್ಟಿರುವುದು ರಸ್ತೆಗಳ ಅಭಿವೃದ್ಧಿಗೆ ಸಹಾಯಕವಾಗುವುದು. ಪಂಚಾಯತಿಯ ಕೆರೆಗಳ ಅಭಿವೃದ್ಧಿಗೆ ನೂರು ಕೋಟಿ ಹಣವು ಜಲಸಂವರ್ಧನೆಗೆ ಅನುಕೂಲವಾಗುವುದು' ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ