ಹುಬ್ಬಳ್ಳಿ : ರಾಜ್ಯದ ಹಲವೆಡೆ ಕೊರೊನಾ ಸದ್ದಿಲ್ಲದೇ ಹೆಚ್ಚಾಗಲಾರಂಭಿಸಿದೆ.
ಅದರಲ್ಲಿಯೂ ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್ ಲ್ಲೇ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಕಾಣಿಸಿಕೊಂಡಿದೆ.
ಅದರಲ್ಲಿಯೂ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿಯೇ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದ್ದು, ಕೊರೋನಾ ವಾರಿಯರ್ಸ್ ಗೆ ಬೂಸ್ಟರ್ ಡೋಸ್ ಕೊಡೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಕೊರೋನಾ ವಾರಿಯರ್ಸ್ ಗೆ ಶೀಘ್ರವೇ ಬೂಸ್ಟರ್ ಡೋಸ್ ಹಾಕಿಸೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನಲೆ ಕಠಿಣ ಕ್ರಮ ಕೈಗೊಳ್ಳೋದು ಅನಿವಾರ್ಯವಿದೆ. ಅದಕ್ಕಾಗಿ ನಾನು ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದೇನೆ. ಡಿಸೆಂಬರ್ 2 ರಂದು ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಮಾಡ್ತೆನೆ.
ಈಗಾಗಲೇ ನಮ್ಮ ಕೊರೊನಾ ವಾರಿಯಸ್೯ ಎರಡೂ ಡೋಸ್ ತೆಗೆದುಕೊಂಡು ಆರೇಳು ತಿಂಗಳು ಕಳೆದಿದೆ. ಅವರಿಗೆ ಬೂಸ್ಟರ್ ಡೋಸ್ ಕೊಡೋ ಬಗ್ಗೆ ಚರ್ಚೆ ಮಾಡ್ತೇವೆ. ಶೀಘ್ರವೇ ಕೊರೊನಾ ವಾರಿಯರ್ಸ್ ಗೆ ಬೂಸ್ಟರ್ ಜೋಸ್ ಕೊಡ್ತೇವೆ ಎಂದರು.